ತಮಿಳು ಸೂಪರ್ ಸ್ಟಾರ್ ವಿಜಯ್, ಹಿಂದಿ ಸಿನಿಮಾದಲ್ಲಿ ನಟಿಸುತ್ತಿರುವುದು ತಿಳಿದ ವಿಚಾರ. ಇದೀಗ ವಿಜಯ್ ಸೇತುಪತಿ ತಮ್ಮ ಮೊದಲ ಹಿಂದಿ ಸಿನಿಮಾದ ಫಸ್ಟ್ಲುಕ್ವೊಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಂತೋಷ್ ಶಿವನ್ ನಿರ್ದೇಶನದ 'ಮುಂಬೈಕರ್' 2017 ರಲ್ಲಿ ಬಿಡುಗಡೆಯಾದ 'ಮಾನಾಗರಮ್' ತಮಿಳು ಚಿತ್ರದ ರೀಮೇಕ್ ಆಗಿದೆ.
'ಮುಂಬೈಯ್ಕರ್' ಸಿನಿಮಾದ ತಮ್ಮ ಫಸ್ಟ್ಲುಕ್ ಬಿಡುಗಡೆ ಮಾಡಿದ ವಿಜಯ್ ಸೇತುಪತಿ - Managaram Tamil movie
ಖ್ಯಾತ ತಮಿಳು ನಟ ವಿಜಯ್ ಸೇತುಪತಿ 'ಮುಂಬೈಕರ್' ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ. ಇದು ವಿಜಯ್ ಸೇತುಪತಿ ಅಭಿನಯದ ಮೊದಲ ಹಿಂದಿ ಚಿತ್ರವಾಗಿದ್ದು ಸಂತೋಷ್ ಶಿವನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಇದನ್ನೂ ಓದಿ:ಒಡಿಶಾದ ವಲಸೆ ಕಾರ್ಮಿಕ ಈಗ ಮಾಲಿವುಡ್ ನಟ.. ಚಿತ್ರ ಆಸ್ಕರ್ಗೆ ನಾಮನಿರ್ದೇಶನ
ಈ ಪೋಸ್ಟರ್ನಲ್ಲಿ ವಿಜಯ್ ಸೇತುಪತಿ ಒಂದು ಕಿವಿಗೆ ಇಯರ್ ಫೋನ್ ಹಾಕಿಕೊಂಡು ಬಲಗೈಯಲ್ಲಿ ರಿವಾಲ್ವರ್ ಹಿಡಿದಿದ್ದಾರೆ. ಎಡಗೈನಲ್ಲಿ ಬಾಲಕನೊಬ್ಬನ ತೋಳು ಹಿಡಿದಿದ್ದಾರೆ. ಬಾಲಕನ ಬಾಯಿಗೆ ಬಟ್ಟೆ ಕಟ್ಟಲಾಗಿದೆ. ಚಿತ್ರದ ಬಗ್ಗೆ ಮಾತನಾಡಿರುವ ನಿರ್ದೇಶಕ ಸಂತೋಷ್ ಶಿವನ್, ಮುಂಬೈ ಮಹಾನಗರಿಗೆ ಎಷ್ಟೋ ಜನರು ಕನಸು ಹೊತ್ತು ಬರುತ್ತಾರೆ. ಇದು ಕನಸಿನ ನಗರ, ಬಹುತೇಕ ಜನರ ಜೀವನದಲ್ಲಿ ಜಾದೂನಂತೆ ಬದಲಾವಣೆ ಮಾಡಿದೆ. ಏನೂ ಇಲ್ಲದೆ ಬಂದವರು ಕೈ ತುಂಬಾ ಸಂಪಾದಿಸಿದ್ದಾರೆ. ಇಂತಹ ಚಿತ್ರದ ಬಗ್ಗೆ ಚಿತ್ರದಲ್ಲಿ ತೋರಿಸಲಾಗಿದೆ" ಎಂದು ಬರೆದುಕೊಂಡಿದ್ದಾರೆ. ಚಿತ್ರಕ್ಕೆ ಸಂತೋಷ್ ಶಿವನ್ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಪ್ರಶಾಂತ್ ಪಿಳ್ಳೈ ಸಂಗೀತ ನೀಡಿದ್ದಾರೆ.