ಹೈದರಾಬಾದ್(ತೆಲಂಗಾಣ):ಬಹುನಿರೀಕ್ಷಿತ- ಪ್ಯಾನ್ ಇಂಡಿಯಾ ಸಿನಿಮಾ 'ಲೈಗರ್' ಚಿತ್ರೀಕರಣ ಅಮೆರಿಕಾದಲ್ಲಿ ನಡೆಯುತ್ತಿದ್ದು, ಚಿತ್ರೀಕರಣದ ಕೆಲ ಫೋಟೋಗಳನ್ನು ನಟ ವಿಜಯ್ ದೇವರಕೊಂಡ ತಮ್ಮ ಅಭಿಮಾನಿಗಳಿಗಾಗಿ ಅವರ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನಟ ವಿಜಯ್ ದೇವರಕೊಂಡ, ಬಾಕ್ಸಿಂಗ್ ದಂತಕಥೆ ಮೈಕ್ ಟೈಸನ್, ನಾಯಕಿ ಅನನ್ಯಾ ಪಾಂಡೆ, ನಿರ್ದೇಶಕ ಪೂರಿ ಜಗನ್ನಾಥ್ ಮತ್ತು ಸಹ-ನಿರ್ಮಾಪಕಿ ಚಾರ್ಮಿ ಕೌರ್ ಅವರ ಜೊತೆ ಒಟ್ಟಾಗಿ ನಿಂತುಕೊಂಡ ಫೋಟೋವನ್ನು ತಮ್ಮ Instagramನಲ್ಲಿ ಹರಿಬಿಟ್ಟಿರುವ ವಿಜಯ್ ದೇವರಕೊಂಡ, 'ಹಲೋ ಫ್ರಂ ಲಾಸ್ಏಂಜಲೀಸ್' ಎಂದು ಬರೆದುಕೊಂಡಿದ್ದಾರೆ.