ಕರ್ನಾಟಕ

karnataka

ETV Bharat / sitara

ಕರಣ್​ಗೆ ಭರವಸೆ ನೀಡಿದ ವಿಜಯ್​ ದೇವರಕೊಂಡ... ಕೊಟ್ಟ ಮಾತೇನು? - ನಿರ್ದೇಶಕ ಕರಣ್ ಜೋಹರ್

ಪುರಿ ಜಗನ್ನಾಥ್ ಅವರ ಮುಂದಿನ ಚಿತ್ರದೊಂದಿಗೆ ವಿಜಯ್ ದೇವರಕೊಂಡ ಅವರು ಪ್ಯಾನ್-ಇಂಡಿಯಾ ಸಿನಿಮಾಕ್ಕಾಗಿ ಸಜ್ಜಾಗುತ್ತಿದ್ದಾರೆ.

karan
ವಿಜಯ್​ ದೇವರಕೊಂಡ

By

Published : May 11, 2020, 7:38 PM IST

ಮುಂಬೈ:ತೆಲುಗು ನಟ ವಿಜಯ್ ದೇವರಕೊಂಡ ಮತ್ತೆ ಪ್ಯಾನ್​ ಇಂಡಿಯನ್​ ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಹಿಂದಿ ಚಿತ್ರ ನಿರ್ದೇಶಕ ಕರಣ್ ಜೋಹರ್​ ಈ ಚಿತ್ರವನ್ನು ಪ್ರೆಸೆಂಟ್​ ಮಾಡಲಿದ್ದಾರಂತೆ.

ಮೇ 9 ರಂದು ವಿಜಯ್​ ತಮ್ಮ 31 ವರ್ಷದ ಜನ್ಮದಿನವನ್ನು ಆಚರಿಸಿಕೊಂಡರು. ಅವರಿಗೆ ಚಿತ್ರರಂಗದ ಅಭಿಮಾನಿಗಳು ಮತ್ತು ಸ್ನೇಹಿತರು ವಿಷ್​ ಮಾಡಿದ್ದರು. ಆದರೆ, ದೇವರಕೊಂಡ ವಿಜಯ್​ಗೆ ಸರ್ಪ್ರೈಸ್​ ಆಗಿದ್ದು, ಕರಣ್​ ಜೋಹರ್​ ಶುಭಾಶಯ. ಕರಣ್​ ವಿಷ್​ ಜೊತೆಗೆ ಒಂದು ಸುದ್ದಿಯನ್ನೂ ಅಲ್ಲಿ ರಿವೀಲ್​ ಮಾಡಿದ್ದರು.

ಜನ್ಮದಿನದ ಶುಭಾಶಯಗಳು ವಿಜಯ್, ನಾವು ಶೀಘ್ರದಲ್ಲೇ ಸಂಭ್ರಮ ಆಚರಿಸುತ್ತೇವೆ. ನೀವು ಪುರಿ ಜಗನ್ನಾಥ್ ಅವರೊಂದಿಗೆ ಪರದೆಯ ಮೇಲೆ ಬರುವುದನ್ನು ನೋಡಲು ಎಲ್ಲರೂ ಕಾತುರದಿಂದ ಕಾಯುತ್ತಿದ್ದೇವೆ, ಎಂದು ಕರಣ್​ ವಿಜಯ್ ಅವರೊಂದಿಗಿರುವ ತಮ್ಮ ಚಿತ್ರವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಕರಣ್ ಅವರ ಟ್ವೀಟ್​ಗೆ ರೀಟ್ವೀಟ್​ ಮಾಡಿದ ವಿಜಯ್​, ಕರಣ್​, ಇನ್ನು ಕಾಯಲು ಸಾಧ್ಯವಿಲ್ಲ, ನಾವೇನು ಮಾಡುತ್ತಿದ್ದೇವೆ ಅನ್ನೋದನ್ನ ಭಾರತ ನೋಡ್ಬೇಕು. ನಿಮ್ಮ ತಮಾಷೆ ಹಾಗೂ ಬೆಂಬಲಕ್ಕೆ ಹೃದಯ ಪೂರ್ವಕ ಧನ್ಯವಾದಗಳು, ನಿಮಗೆ 'ಅದ್ಭುತವಾದ ಸ್ಮರಣಿಯ ಚಿತ್ರ' ಕೊಡುವ ಜವಾಬ್ದಾರಿಯನ್ನ ನಾನು ಹೊಂದಿದ್ದೇನೆ ಎಂದಿದ್ದಾರೆ.

ಹಿಂದಿಯಲ್ಲಿ ಕರಣ್ ಮತ್ತು ಅಪೂರ್ವಾ ಮೆಹ್ತಾ ಅವರು ನಿರ್ದೇಶಿಸಲಿರುವ ಈ ಹೊಸ ಚಿತ್ರದಲ್ಲಿ ರೋನಿತ್ ರಾಯ್ ಮತ್ತು ರಮ್ಯಾ ಕೃಷ್ಣನ್ ಸಹ ನಟಿಸಿದ್ದಾರೆ. ದಕ್ಷಿಣದ ಎಲ್ಲ ಭಾಷೆಗಳಲ್ಲೂ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆ ನಡೆಯುತ್ತಿದೆ.

ABOUT THE AUTHOR

...view details