ಟಾಲಿವುಡ್ ಯುವ ಹೀರೋ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂಗಳವಾರ ಸಂಜೆ ಮುಂಬೈನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಮತ್ತೊಮ್ಮೆ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದರಿಂದ ಅಭಿಮಾನಿಗಳ ತಲೆಯಲ್ಲಿ ಹುಳಬಿಟ್ಟಂತಾಗಿದೆ.
ವಿಜಯ್ ದೇವರಕೊಂಡ ಜೊತೆ ಮತ್ತೆ ಕಾಣಿಸಿಕೊಂಡ ಕೊಡವತಿ... ಅಭಿಮಾನಿಗಳ ಮನದಲಿ ಸಂದೇಹದ ಅಲೆ! - ಮುಂಬೈನಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ
ಕೊಡಗಿನ ಸಿಂಗಾರಿ ರಶ್ಮಿಕಾ ಮಂದಣ್ಣ ಮಂಗಳವಾರ ಸಂಜೆ ಮುಂಬೈನಲ್ಲಿ ವಿಜಯ್ ದೇವರಕೊಂಡ ಮತ್ತೆ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಎದೆಯಲ್ಲಿ ಸಂದೇಹದ ಅಲೆ ಮೂಡಿದೆ.
![ವಿಜಯ್ ದೇವರಕೊಂಡ ಜೊತೆ ಮತ್ತೆ ಕಾಣಿಸಿಕೊಂಡ ಕೊಡವತಿ... ಅಭಿಮಾನಿಗಳ ಮನದಲಿ ಸಂದೇಹದ ಅಲೆ!](https://etvbharatimages.akamaized.net/etvbharat/prod-images/768-512-4338972-512-4338972-1567605242363.jpg)
ವಿಜಯ್ ದೇವರಕೊಂಡ ಮತ್ತೆ ಕಾಣಿಸಿಕೊಂಡ ಕೊಡವಿನ ಸಿಂಗಾರಿ
ಅಸಲಿ ಸಂಗತಿಯೇ ಏನಂದ್ರೆ ಇವರಿಬ್ಬರು ಇತ್ತೀಚೆಗೆ ನಟಿಸಿರುವ ಚಿತ್ರ ‘ಡಿಯರ್ ಕಾಮ್ರೇಡ್’ ಪ್ರೇಕ್ಷಕರ ಮುಂದೆ ಬಂದಿತ್ತು. ಆ ಸಿನಿಮಾ ಪ್ರತ್ಯೇಕ ಪ್ರದರ್ಶನ ಮುಂಬೈನಲ್ಲಿ ಏರ್ಪಾಟು ಮಾಡಲಾಗಿದೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ನಟ-ನಟಿ ಇಬ್ಬರು ಹಾಜರಾಗಿದ್ದರು.
ದಕ್ಷಿಣ ಭಾರತದ ನಾಲ್ಕು ಭಾಷೆಯಲ್ಲಿ ಬಿಡುಗಡೆಗೊಂಡಿದ್ದ ಈ ಚಿತ್ರ ಪ್ರೇಕ್ಷಕರ ಮನ ಗೆಲ್ಲಲು ವಿಫಲವಾಗಿತ್ತು. ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿರುವ ಈ ಚಿತ್ರಕ್ಕೆ ಭರತ್ ಕಮ್ಮ ನಿರ್ದೇಶಿಸಿದ್ದರು. ಬಾಲಿವುಡ್ನ ಪ್ರಮುಖ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹಾರ್ ಈ ಚಿತ್ರದ ಹಿಂದಿ ರಿಮೇಕ್ ಹಕ್ಕನ್ನು ಪಡೆದಿದ್ದಾರೆ.