ಕರ್ನಾಟಕ

karnataka

ವಿಜಯ್ ದೇವರಕೊಂಡ ಬಾಲಿವುಡ್ ಎಂಟ್ರಿ...ಚಿತ್ರಕ್ಕಾಗಿ ಮಾರ್ಷಲ್ ಆರ್ಟ್ ಕಲಿತಿದ್ದಾರಂತೆ 'ಫೈಟರ್'

By

Published : Jan 20, 2020, 7:25 PM IST

ವಿಜಯ್ ದೇವರಕೊಂಡ ನಟಿಸುತ್ತಿರುವ ಈ ಸಿನಿಮಾವನ್ನು ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ನಿರ್ದೇಶಿಸುತ್ತಿದ್ದಾರೆ. ನಿನ್ನೆ ಮುಂಬೈನಲ್ಲಿ ಚಿತ್ರ ಸೆಟ್ಟೇರಿದೆ. ಚಿತ್ರಕ್ಕೆ 'ಫೈಟರ್​' ಎಂದು ಹೆಸರಿಡಲು ಚಿತ್ರತಂಡ ತೀರ್ಮಾನಿಸಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಂದಿಲ್ಲ.

Fighter
'ಫೈಟರ್'

ಕನ್ನಡ, ತೆಲುಗು, ತಮಿಳಿನಲ್ಲಿ ಹೆಸರು ಮಾಡಿದ ಸಾಕಷ್ಟು ನಟ-ನಟಿಯರು ಬಾಲಿವುಡ್​​ನಲ್ಲಿ ಕೂಡಾ ಪ್ರಮುಖ ಪಾತ್ರಗಳಲ್ಲಿ ನಟಿಸುವ ಮೂಲಕ ತಮ್ಮ ಛಾಪು ಮೂಡಿಸಿದ್ದಾರೆ. ಬಾಹುಬಲಿ ನಂತರ ಪ್ರಭಾಸ್​​ 'ಸಾಹೋ' ಹಿಂದಿ ಸಿನಿಮಾದಲ್ಲಿ ನಾಯಕನ ಸ್ಥಾನ ಗಳಿಸಿದ್ದರು.ಇದೀಗ ನಟ ವಿಜಯ್ ದೇವರಕೊಂಡ ಕೂಡಾ ಬಾಲಿವುಡ್​ಗೆ ಹಾರಿದ್ದಾರೆ.

'ಫೈಟರ್' ಚಿತ್ರಕ್ಕೆ ಮುಹೂರ್ತ

ಇನ್ನು ವಿಜಯ್ ದೇವರಕೊಂಡ ನಟಿಸುತ್ತಿರುವ ಈ ಸಿನಿಮಾವನ್ನು ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ನಿರ್ದೇಶಿಸುತ್ತಿದ್ದಾರೆ. ನಿನ್ನೆ ಮುಂಬೈನಲ್ಲಿ ಚಿತ್ರ ಸೆಟ್ಟೇರಿದೆ. ಚಿತ್ರಕ್ಕೆ 'ಫೈಟರ್​' ಎಂದು ಹೆಸರಿಡಲು ಚಿತ್ರತಂಡ ತೀರ್ಮಾನಿಸಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಂದಿಲ್ಲ. ಪೂರಿ ಕನೆಕ್ಟ್​ ಬ್ಯಾನರ್ ಅಡಿ ಪೂರಿ ಜಗನ್ನಾಥ್​ ಹಾಗೂ ಚಾರ್ಮಿ ಕೌರ್ ಈ ಸಿನಿಮಾವನ್ನು ಜೊತೆಯಾಗಿ ನಿರ್ಮಿಸುತ್ತಿದ್ದಾರೆ. ಇವರೊಂದಿಗೆ ಬಾಲಿವುಡ್ ಪ್ರಮುಖ ಚಿತ್ರ ನಿಮಾತೃ ಕರಣ್ ಜೋಹರ್ ಕೂಡಾ ಈ ಸಿನಿಮಾದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಈ ವಿಷಯವನ್ನು ಪ್ರಮುಖ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದ್ದಾರೆ. ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿ ನಾಲ್ಕು ಭಾಷೆಗಳಲ್ಲಿ ಈ ಸಿನಿಮಾ ತಯಾರಾಗಲಿದೆ. ಈ ಸಿನಿಮಾಗಾಗಿ ವಿಜಯ್ ಥಾಯ್ಲೆಂಡ್​​ಗೆ ತೆರಳಿ ಮಾರ್ಷಲ್ ಆರ್ಟ್ ಕಲಿತಿದ್ದಾರಂತೆ. ರಮ್ಯಕೃಷ್ಣ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ನಾಯಕಿಯಾಗಿ ಅನನ್ಯ ಪಾಂಡೆ ನಟಿಸುತ್ತಿದ್ದರೆ ವಿಲನ್ ಆಗಿ ರೌನಿತ್ ರಾಯ್ ನಟಿಸುತ್ತಿದ್ದಾರೆ.

ABOUT THE AUTHOR

...view details