ಹೈದರಾಬಾದ್: ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಮತ್ತು ಖ್ಯಾತ ನಟಿ ಕಿಯಾರಾ ಅಡ್ವಾಣಿ ಅವರು ಬುಧವಾರ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಕಿಯಾರಾ ಅವರ ಮಾಸ್ಕ್ ತೆಗೆಯಲು ಅಮೀರ್ ಖಾನ್ ಸಹಕರಿಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಬ್ರಾಂಡ್ವೊಂದರ ಅಂಬಾಸಿಡರ್ಗಳಾಗಿರುವ ಅಮೀರ್ ಮತ್ತು ಕಿಯಾರಾ, ಕಂಪನಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಫೇಸ್ ಮಾಸ್ಕ್ ಧರಿಸಿ ಬಂದು ವೇದಿಕೆ ಮೇಲೆ ಬಂದರು. ಮಾಸ್ಕ್ ತೆಗೆಯುವ ಸಂದರ್ಭ ಕಿಯಾರಾ ಅವರ ಮಾಸ್ಕ್ ಕಿವಿಯೋಲೆಗೆ ಸಿಕ್ಕಿಹಾಕಿಕೊಂಡಿತ್ತು. ಅದನ್ನು ಬಿಡಿಸಲು ಹರಸಾಹಸ ಪಡುತ್ತಿದ್ದ ನಟಿಗೆ ಅಮೀರ್ ಸಹಾಯ ಮಾಡಿದ್ದಾರೆ.