ಹೈದರಾಬಾದ್(ತೆಲಂಗಾಣ):ಇತ್ತೀಚೆಗಷ್ಟೇ ವಿವಾಹವಾಗಿ ರಿಯಲ್ ಜೋಡಿಯಾಗಿರುವ ಬಾಲಿವುಡ್ ನಟ ವಿಕ್ಕಿ ಕೌಶಲ್ ಮತ್ತು ನಟಿ ಕತ್ರಿನಾ ಕೈಫ್ ತೆರೆಯ ಮೇಲೂ ಜೋಡಿಯಾಗಿ ಅಭಿಮಾನಿಗಳ ಮೋಡಿ ಮಾಡಲಿದ್ದಾರೆ. ನಟ ಫರ್ಹಾನ್ ಅಕ್ತರ್ ನಿರ್ದೇಶಿಸಲಿರುವ 'ಜೀ ಲೆ ಜರಾ' ಸಿನಿಮಾದಲ್ಲಿ ಕತ್ರಿನಾಗೆ, ವಿಕ್ಕಿ ಕೌಶಲ್ ನಾಯಕನಾಗಿ ನಟಿಸುವ ಸಾಧ್ಯತೆ ಇದೆ.
ಸಿನಿಮಾ ತಂಡವೂ ಕೂಡ ಈ ಬಗ್ಗೆ ವಿಕ್ಕಿಯನ್ನು ಕೇಳಿಕೊಂಡಿದೆ. ವಿಕ್ಕಿ ಕೌಶಲ್ ಇದಕ್ಕೆ ಸಮ್ಮತಿ ನೀಡಿದರೆ ಪತ್ನಿ ಕತ್ರಿನಾ ಜೊತೆ ಮಾಡಲಿರುವ ಮೊದಲ ಸಿನಿಮಾ ಇದಾಗಲಿದೆ. ಈಗಾಗಲೇ ಜೀ ಲೇ ಜರಾ ಸಿನಿಮಾದಲ್ಲಿ ಆಲಿಯಾ ಭಟ್, ಪ್ರಿಯಾಂಕಾ ಛೋಪ್ರಾ, ಕತ್ರಿನಾ ಕೈಫ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.