ರಾಷ್ಟ್ರಪ್ರಶಸ್ತಿ ವಿಜೇತ, ಬಾಲಿವುಡ್ ನಟ ವಿಕ್ಕಿ ಕೌಶಲ್ ತಾವು ಮಾರ್ಷಲ್ ಆರ್ಟ್ ಪ್ರಾಕ್ಟೀಸ್ ಮಾಡುತ್ತಿರುವ ಫೋಟೋವೊಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಾರ್ಷಲ್ ಆರ್ಟ್ ಪ್ರಾಕ್ಟೀಸ್ ಮಾಡುವಾಗ ವಿಕ್ಕಿ ಬಲ ಕೈಗೆ ಪೆಟ್ಟಾಗಿದ್ದು ಬ್ಯಾಂಡೇಜ್ ಸುತ್ತಿಕೊಂಡಿರುವ ದೃಶ್ಯವನ್ನು ಫೋಟೋದಲ್ಲಿ ಕಾಣಬಹುದು.
ಮುಂಬರುವ ಚಿತ್ರಕ್ಕಾಗಿ ಮಾರ್ಷಲ್ ಆರ್ಟ್ ಅಭ್ಯಾಸ ಮಾಡುತ್ತಿರುವ ವಿಕ್ಕಿ ಕೌಶಲ್
ತಮ್ಮ ಹೊಸ ಚಿತ್ರಕ್ಕಾಗಿ ಬಾಲಿವುಡ್ ನಟ ವಿಕ್ಕಿ ಕೌಶಲ್ ಮಾರ್ಷಲ್ ಆರ್ಟ್ ಪ್ರಾಕ್ಟೀಸ್ ಮಾಡುತ್ತಿದ್ದಾರೆ. 'ಅಶ್ವತ್ಥಾಮ' ಚಿತ್ರವನ್ನು ರೊನಿ ಸ್ಕ್ರಿವಾಲ ನಿರ್ಮಿಸುತ್ತಿದ್ದು 'ಉರಿ' ನಿರ್ದೇಶಕ ಆದಿತ್ಯಧರ್ ನಿರ್ದೇಶಿಸುತ್ತಿದ್ದಾರೆ.
ಇದನ್ನೂ ಓದಿ:ಕ್ಯಾಮರಾ ಕಣ್ಣಿಗೆ ಸೆರೆಯಾದ ಬಾಲಿವುಡ್ ಸೆಲೆಬ್ರಿಟಿಗಳು: ವಿಡಿಯೋ
ಎರಡೂ ಕೈಗಳಲ್ಲಿ ದೊಣ್ಣೆ ಹಿಡಿದಿರುವ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಕ್ಕಿ ಕೌಶಲ್ ರಕ್ತ, ಬೆವರು ಹಾಗೂ ಕೊಳೆಯೊಂದಿಗೆ ಸೋಮವಾರ ಮುಂಜಾವು ಆರಂಭವಾಗಿದೆ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಮಹಾಭಾರತದ ಪಾತ್ರವೊಂದನ್ನು ಆಧಾರವಾಗಿರಿಸಿಕೊಂಡು ಈ ಚಿತ್ರವನ್ನು ತಯಾರಿಸಲಾಗುತ್ತಿದೆ ಎನ್ನಲಾಗಿದೆ. ಆದರೆ ತಾವು ಯಾವ ಚಿತ್ರಕ್ಕಾಗಿ ಮಾರ್ಷಲ್ ಆರ್ಟ್ ಅಭ್ಯಾಸ ಮಾಡುತ್ತಿದ್ದೇನೆ ಎಂದು ವಿಕ್ಕಿ ಕೌಶಲ್ ಹೇಳದಿದ್ದರೂ ಮುಂಬರುವ 'ದಿ ಇಮಾರ್ಟಲ್ ಅಶ್ವತ್ಥಾಮ' ಚಿತ್ರಕ್ಕಾಗಿ ವಿಕ್ಕಿ ಕೌಶಲ್ ಮಾರ್ಷಲ್ ಆರ್ಟ್ ಅಭ್ಯಾಸ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. 'ಉರಿ' ನಿರ್ದೇಶಕ ಆದಿತ್ಯಧರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ರೊನಿ ಸ್ಕ್ರಿವಾಲ 'ಅಶ್ವತ್ಥಾಮ' ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸಿನಿಮಾ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ.