ಕರ್ನಾಟಕ

karnataka

ETV Bharat / sitara

ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನೆಕ್ಷಾ ಜನ್ಮದಿನ: 'ನೀವೊಬ್ಬ ದಂತಕಥೆ' ಎಂದು ಸ್ಮರಿಸಿದ ಬಾಲಿವುಡ್​ ನಟ - ನಟ ವಿಕಿ ಕೌಶಲ್ ಮುಂಬರುವ ಚಿತ್ರ

ಮಾನೆಕ್ಷಾಗೆ ಗೌರವ ಸಲ್ಲಿಸಿದ ವಿಕ್ಕಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮೇಘನಾ ಗುಲ್ಜಾರ್ ನೇತೃತ್ವದ ಮುಂಬರುವ ಸಿನಿಮಾದಲ್ಲಿ ನಟ ವಿಕ್ಕಿ ಕೌಶಲ್ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನೆಕ್ಷಾ ಪಾತ್ರದಲ್ಲಿ ನಟಿಸಲಿದ್ದಾರೆ.

ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನೆಕ್ಷಾರನ್ನು ಸ್ಮರಿಸಿದ ಬಾಲಿವುಡ್​ ನಟ ವಿಕಿ ಕೌಶಲ್
ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನೆಕ್ಷಾರನ್ನು ಸ್ಮರಿಸಿದ ಬಾಲಿವುಡ್​ ನಟ ವಿಕಿ ಕೌಶಲ್

By

Published : Apr 3, 2021, 1:15 PM IST

ಹೈದರಾಬಾದ್:ಮೇಘನಾ ಗುಲ್ಜಾರ್ ನೇತೃತ್ವದ ಮುಂಬರುವ ಸಿನಿಮಾದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ, ಬಾಲಿವುಡ್ ನಟ ವಿಕ್ಕಿ ಕೌಶಲ್ ಅವರು ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನೆಕ್ಷಾ ಪಾತ್ರದಲ್ಲಿ ನಟಿಸಲಿದ್ದಾರೆ. ಇಂದು ಮಾನೆಕ್ಷಾ ಅವರ ಜನ್ಮ ದಿನಾಚರಣೆಗೆ ನಟ ವಿಕ್ಕಿ ತಮ್ಮ ಗೌರವ ಸಲ್ಲಿಸಿ ಸ್ಮರಿಸಿದ್ದಾರೆ.

ಸ್ಯಾಮ್ ಮಾನೆಕ್ಷಾ, ಅಥವಾ ಸ್ಯಾಮ್ ಬಹದ್ದೂರ್ ಫೀಲ್ಡ್ ಮಾರ್ಷಲ್ ಅವರು 1914ರ ಏಪ್ರಿಲ್​ 3ರಂದು ಜನಿಸಿದರು. ತಮ್ಮ ಮುಂದಿನ ಚಿತ್ರದಲ್ಲಿ ಸ್ಯಾಮ್ ಮಾನೆಕ್ಷಾ ಪಾತ್ರದಲ್ಲಿ ವಿಕ್ಕಿ ಕಾಣಿಸಿಕೊಳ್ಳಲಿದ್ದಾರೆ.

ಮಾನೆಕ್ಷಾಗೆ ಗೌರವ ಸಲ್ಲಿಸಿದ ವಿಕ್ಕಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಇದನ್ನು ಗುಲ್ಜಾರ್ ಅವರ ಅಸಂಗತ ಶೈಲಿ ಮತ್ತು ವಿಶಿಷ್ಟ ಧ್ವನಿಯಿಂದ ಅಲಂಕರಿಸಲಾಗಿದೆ. "ಇವರೊಂದು ದಂತಕಥೆ, ಕೆಚ್ಚೆದೆಯ ಹೃದಯ. ನಮ್ಮ ಸ್ಯಾಮ್ ಬಹದ್ದೂರ್ ಫೀಲ್ಡ್ ಮಾರ್ಷಲ್'' ಎಂದು ಬರೆದುಕೊಂಡಿದ್ದಾರೆ.

ಚಿತ್ರದ ಬಗ್ಗೆ ಮತ್ತು ಅವರು ಮುಖ್ಯ ಪಾತ್ರವನ್ನು ವಹಿಸಿಕೊಂಡ ವಿಕ್ಕಿ ಈ ಹಿಂದೆ, ಫೀಲ್ಡ್ ಮಾರ್ಷಲ್ ಮಾನೆಕ್ಷಾ ಪಾತ್ರವನ್ನು ನಿರ್ವಹಿಸುವ ಅವಕಾಶವನ್ನು ಪಡೆದಿರುವುದು ನನಗೆ ಅತ್ಯುನ್ನತ ಗೌರವವಾಗಿದೆ. ಆ ಚಿತ್ರದ ಬಗ್ಗೆ ನಾನು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದರು.

ABOUT THE AUTHOR

...view details