ಮುಂಬೈ:ಬಾಲಿವುಡ್ ತನ್ನ ತಾರೆಗಳಾದ ರಿಷಿ ಕಪೂರ್, ಇರ್ಫಾನ್ ಖಾನ್, ವಾಜಿದ್ ಖಾನ್ ಮತ್ತು ಸುಶಾಂತ್ ಸಿಂಗ್ ರಜಪೂತ್ ಅವರನ್ನು ಕಳೆದುಕೊಂಡು ಶೋಕಿಸುತ್ತಿರುವುದರಿಂದ, ನಟ ವಿಕ್ಕಿ ಕೌಶಲ್ ಎಲ್ಲರ ಶಾಂತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದರು.
ಅಗಲಿದ ಬಾಲಿವುಡ್ ತಾರೆಗಳು: ಎಲ್ಲರ ಶಾಂತಿ, ಸಮೃದ್ಧಿಗಾಗಿ ಪ್ರಾರ್ಥಿಸಿದ 'ಉರಿ' ವೀರ - ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ
ಪವಿತ್ರ ಸಿಖ್ ದೇಗುಲ ಗೋಲ್ಡನ್ ಟೆಂಪಲ್ ಮುಂದೆ ತಲೆಬಾಗಿ ನಿಂತಿರುವ ಫೊಟೋ ಪೋಸ್ಟ್ ಮಾಡಿರುವ ವಿಕ್ಕಿ ಕೌಶಲ್, ನಿಧನರಾದವರು ಸೇರಿದಂತೆ ಎಲ್ಲರ ಶಾಂತಿ ಮತ್ತು ಸಂತೋಷಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಬರೆದಿದ್ದಾರೆ.
ಪವಿತ್ರ ಸಿಖ್ ದೇಗುಲ ಗೋಲ್ಡನ್ ಟೆಂಪಲ್ ಮುಂದೆ ತಲೆಬಾಗಿ ನಿಂತಿರುವ ಫೊಟೋ ಪೋಸ್ಟ್ ಮಾಡಿರುವ ವಿಕ್ಕಿ ಕೌಶಲ್, ನಿಧನರಾದವರು ಸೇರಿದಂತೆ ಎಲ್ಲರ ಶಾಂತಿ ಮತ್ತು ಸಂತೋಷಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಬರೆದಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಅವರ ಹಠಾತ್ ನಿಧನದ ಹಿನ್ನೆಲೆಯಲ್ಲಿ ವಿಕ್ಕಿ ಈ ಪೋಸ್ಟ್ ಮಾಡಿದ್ದಾರೆ.
"ಅವನನ್ನು ಎಂದಿಗೂ ಚೆನ್ನಾಗಿ ತಿಳಿದುಕೊಂಡಿಲ್ಲ. ಆದರೆ ಇದು ಬಹಳ ನೋವು ಕೊಡುತ್ತಿದೆ. ಅವನು ಅನುಭವಿಸಿದ ನೋವು ಮತ್ತು ಅವನ ಕುಟುಂಬ ಹಾಗೂ ಸ್ನೇಹಿತರು ಅನುಭವಿಸುತ್ತಿರುವ ನೋವು ಊಹಿಸಲೂ ಸಾಧ್ಯವಿಲ್ಲ. ದೇವರು ಅವರಿಗೆ ಶಕ್ತಿ ನೀಡಲಿ." ಎಂದು ಸುಶಾಂತ್ ಕುರಿತು ವಿಕ್ಕಿ ಕೌಶಲ್ ಬರೆದಿದ್ದಾರೆ.