ಕರ್ನಾಟಕ

karnataka

ETV Bharat / sitara

ಉರಿ ವೀರನ ಸಿಂಗಲ್​ ಸ್ಟೇಟಸ್​ ಬಗ್ಗೆ ಗಾಳಿ ಸುದ್ದಿ... ಅಡ'ಕತ್ರಿ'ಯಲ್ಲಿ ಸಿಕ್ಕಿಬಿದ್ರಾ ವಿಕ್ಕಿ ಕೌಶಲ್​..? - ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್

ಉರಿ ಸಿನಿಮಾ ಮೂಲಕ ಹೆಚ್ಚು ಗಮನ ಸೆಳೆದ ಬಾಲಿವುಡ್​ ನಟ ವಿಕ್ಕಿ ಕೌಶಲ್,​ ಇದೀಗ ಬ್ಯುಸಿ ನಟ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ, ಬಾಲಿವುಡ್​ನಲ್ಲಿ ಹರಿದಾಡುತ್ತಿರುವ ಗಾಸಿಪ್​​​ಗಳು ಇವರನ್ನೂ ಬಿಟ್ಟಿಲ್ಲ. ಈ​ ಗಾಳಕ್ಕೆ ವಿಕ್ಕಿ ಸಹ ಸಿಲಿಕಿದ್ದು ಈ ಬಗ್ಗೆ ಮೌನ ಮುರಿದಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಕೇಳಿ ಬರುತ್ತಿರುವ ವದಂತಿಗಳಿಗೆ ಬ್ರೇಕ್​ ಹಾಕಿದ್ದಾರೆ.

ಬಾಲಿವುಡ್​ ನಟ ವಿಕ್ಕಿ ಕೌಶಲ್

By

Published : Sep 20, 2019, 8:10 PM IST

ನಟಿ ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್ ನಡುವೆ ಏನೋ ನಡೆಯುತ್ತಿದೆ ಎಂಬ ಗಾಳಿ ಸುದ್ದಿ ಇದೆ. ಆದ್ರೆ ಇದು ಕೇವಲ ವದಂತಿ ಅಷ್ಟೇ ಎಂದು ತಮ್ಮ ಮದುವೆ ಬಗ್ಗೆಯೂ ಮೌನ ಮುರಿದಿದ್ದಾರೆ. 'ನನ್ನ ಮತ್ತು ಕತ್ರಿನಾ ಕೈಫ್ ಬಗ್ಗೆ ತಿಂಗಳುಗಳಿಂದ ವದಂತಿಗಳು ನಡೆಯುತ್ತಲೇ ಇವೆ ಎಂದು ಒಳಗೊಳಗೆ ಮುಗುಳುನಗೆ ಸಹ ಬೀರಿದ್ದಾರೆ.

ನಟಿ ಕತ್ರಿನಾ ಕೈಫ್​

ಮದುವೆ ಅಂದ್ರೆ ಸಿನಿಮಾ ಅಲ್ಲ. ಮದುವೆ ಅದಾಗೇ ನಡೆಯಬೇಕು. ಶೀಘ್ರದಲ್ಲಿಯೇ ಇದಕ್ಕೆ ಬ್ರೇಕ್​ ಬೀಳಲಿದೆ ಎಂದಿದ್ದಾರೆ. ಆದರೆ, ಹುಡುಗಿ ಯಾರು ಅನ್ನೋದನ್ನು ಮಾತ್ರ ಬಹಿರಂಗಪಡಿಸಿಲ್ಲ. ಮಾಧ್ಯಮದಲ್ಲಿ ಹರಿದಾಡುತ್ತಿರುವ ಸುದ್ದಿ ನೋಡಿ ವಿಕ್ಕಿ ತಂದೆ-ತಾಯಿ ಸಹ ಕೇಳಿದ್ದಾರಂತೆ. ಹರ್ಲೀನ್ ಸೇಥಿ ಹಾಗೂ ವಿಕ್ಕಿ ಕೌಶಲ್​ ನಡುವಿನ ಸ್ನೇಹ ಮುರಿದುಬಿದ್ದಿದ್ದು ವಿಕ್ಕಿ ಇತ್ತೀಚೆಗೆ ನಾನು ಸಿಂಗಲ್​ ಎಂದು ಹೇಳಿಕೊಂಡು ಓಡಾಡುತ್ತಿದ್ದಾರಂತೆ. ಆದ್ರೆ, ಇತ್ತೀಚೆಗೆ ಕತ್ರಿನಾ ಕೈಫ್ ಜೊತೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ ಎನ್ನೋದು ಬಾಲಿವುಡ್​ನ ಮಾತು. ​

ABOUT THE AUTHOR

...view details