ಮುಂಬೈ (ಮಹಾರಾಷ್ಟ್ರ):ಕಳೆದ ವರ್ಷ ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್‌ನ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಧರ್ಮ ಪ್ರೊಡಕ್ಷನ್ಸ್ ಸಿಇಒ ಅಪೂರ್ವ ಮೆಹ್ತಾ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸಖತ್ ಆಗಿ ಮಿಂಚಿದ್ದಾರೆ. ಈ ಜೋಡಿ ಪಾರ್ಟಿಗೆ ಬರುವ ವೇಳೆ ಕೈ ಕೈ ಹಿಡಿದುಕೊಂಡು ಆಗಮಿಸುವ ಮೂಲಕ ನೆರದಿದ್ದವರ ಗಮನ ಸೆಳೆದರು.
ಕತ್ರಿನಾ ಹಾಟ್ ಬ್ಲೂ ಡ್ರೆಸ್ ಜೊತೆಗೆ ಮಿನುಗುವ ಕಪ್ಪು ಹೈ ಹೀಲ್ಸ್ ಧರಿಸಿದ್ದರೆ ಪತಿ ವಿಕೆ ಬ್ಲ್ಯಾಕ್ ಅಂಡ್ ಬ್ಲ್ಯಾಕ್ ಪ್ಯಾಂಟ್, ಶರ್ಟ್ ಜೊತೆಗೆ ಹೂವಿನ ಚಿತ್ರವಿರುವ ಕಪ್ಪು ಬ್ಲೇಜರ್‌ನಲ್ಲಿ ಮಿ ಮಿರ ಮಿಂಚಿದರು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ನವ ದಂಪತಿಯ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಬ್ಬರು ಒಟ್ಟಿಗೆ ತುಂಬಾ ಹಾಟ್ ಆಗಿ ಕಾಣುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.