ಹೈದರಾಬಾದ್(ತೆಲಂಗಾಣ):ಬಾಲಿವುಡ್ ತಾರಾ ಜೋಡಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ರ ವಿವಾಹ ಕಾರ್ಯಕ್ರಮ ಪ್ರಸಾರಕ್ಕೆ ಕಡಿವಾಣ ಹಾಕಿರುವುದು ಜನರಲ್ಲಿ ಇನ್ನಿಲ್ಲದ ಕುತೂಹಲ ಮೂಡಿಸಿದೆ. ಈ ಮಧ್ಯೆ ಪ್ರಮುಖ ಒಟಿಟಿಯೊಂದು ವಿಕ್ಯಾಟ್ ಮದುವೆ ಪ್ರಸಾರಕ್ಕಾಗಿ 100 ಕೋಟಿ ರೂಪಾಯಿ ನೀಡಲು ಮುಂದಾಗಿದೆ ಎಂದು ಗೊತ್ತಾಗಿದೆ.
ಇಂದಿನಿಂದ ಡಿಸೆಂಬರ್ 9ರ ವರೆಗೆ ನಡೆಯುವ ಮದುವೆ ದೃಶ್ಯಗಳ ಪ್ರಸಾರ ಹಕ್ಕು ನೀಡಿದರೆ 100 ಕೋಟಿ ರೂಪಾಯಿ ನೀಡಲಾಗುವುದು ಎಂದು ಒಟಿಟಿಯೊಂದು ಮುಂದೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ವಿದೇಶಗಳಲ್ಲಿ ವಿವಾಹ ಕಾರ್ಯಕ್ರಮದ ದೃಶ್ಯಗಳನ್ನು ವಾಹಿನಿಗಳಿಗೆ ಮಾರಾಟ ಮಾಡುವುದು ಪ್ರವೃತ್ತಿಯಾಗಿದೆ. ಇದೇ ರೀತಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ರ ವಿವಾಹದ ದೃಶ್ಯಗಳನ್ನು ಪ್ರಸಾರ ಮಾಡಲು ಸಾಮಾಜಿಕ ಮಾಧ್ಯಮವೊಂದು 100 ಕೋಟಿ ರೂಪಾಯಿ ಆಫರ್ ನೀಡಿದೆ. ಇದಕ್ಕೆ ವಿಕ್ಯಾಟ್ ಅನುಮತಿ ನೀಡುತ್ತಾರೋ ಇಲ್ಲವೋ ಎಂಬುದು ತಿಳಿದುಬಂದಿಲ್ಲ.