ಜೈಪುರ(ರಾಜಸ್ಥಾನ):ಬಾಲಿವುಡ್ ಸೆಲೆಬ್ರಿಟಿಗಳಾದ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ರ ಮದುವೆ ಸಮಾರಂಭ ಇಂದು ರಾತ್ರಿಯಿಂದ ಶುರುವಾಗಲಿದೆ. ರಾಜಸ್ಥಾನದ ಸಿಕ್ಸ್ ಸೆನ್ಸ್ ಹೋಟೆಲ್‌ನಲ್ಲಿ ಅದ್ಧೂರಿ ಮದುವೆ ಸಮಾರಂಭ ಆಯೋಜಿಸಲಾಗಿದ್ದು, ಪಿಂಕ್ ಸಿಟಿಗೆ ಬರುವ ಕತ್ರಿನಾ ಮತ್ತು ವಿಕ್ಕಿ ಕೌಶಲ್ಗೆ ಭವ್ಯ ಮತ್ತು ಸಾಂಪ್ರದಾಯಿಕ ಸ್ವಾಗತವನ್ನು ಏರ್ಪಡಿಸಲಾಗಿದೆ.
ಮೂಲಗಳ ಪ್ರಕಾರ, ಕತ್ರಿನಾ ಮತ್ತು ವಿಕ್ಕಿ ಮಧ್ಯಾಹ್ನ 12 ಗಂಟೆಗೆ ಮುಂಬೈನಿಂದ ಹೊರಟಿದ್ದು, ಸಂಜೆ 6 ಗಂಟೆಗೆ ಜೈಪುರವನ್ನು ತಲುಪಲಿದ್ದಾರೆ. ಬಳಿಕ ರಸ್ತೆ ಮಾರ್ಗದ ಮೂಲಕ ಸಿಕ್ಸ್ ಸೆನ್ಸ್ ಹೋಟೆಲ್ ಪ್ರವೇಶಿಸಲಿದ್ದಾರೆ.