ಹೈದರಾಬಾದ್ (ತೆಲಂಗಾಣ): ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಇಂದು ಹಸೆಮಣೆ ಏರುತ್ತಿದ್ದು, ಎಲ್ಲರ ಚಿತ್ರ ಇದೀಗ ಈ ಬಾಲಿವುಡ್ ಜೋಡಿ ಮೇಲೆಯೇ ನೆಟ್ಟಿದೆ. ಕಾರಣ ಭಾರತೀಯ ಚಿತ್ರರಂಗದಲ್ಲೇ ಇದೊಂದು ಹೈಪ್ರೊಫೈಲ್ ಹಾಗೂ ಅತ್ಯಂತ ದುಬಾರಿ ಮದುವೆ ಎನ್ನಲಾಗುತ್ತಿದ್ದು, ಸಹಜವಾಗಿ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಭಾರಿ ವಿಜೃಂಭಣೆಯಿಂದ ನಡೆಯುತ್ತಿರುವ ಈ ಮದುವೆಗೆ ಈಗಾಗಲೇ ಭರದ ಸಿದ್ಧತೆ ನಡೆದಿದೆ. ಕೋಟ್ಯಂತರ ರೂಪಾಯಿ ವ್ಯಯಿಸಿ ಹಸೆಮಣೆ ಏರುತ್ತಿರುವುದೇನೋ ನಿಜ. ಆದರೆ, ಈ ಹಣದ ಹೊಣೆ ಹೊತ್ತವರಾರು ಗೊತ್ತಾ? ತಮಗೆ ಬೇಕಾದ ಅತಿಥಿಗಳನ್ನು ಕರೆಸಿಕೊಳ್ಳುವುದರಿಂದ ಹಿಡಿದು ರಾಜಸ್ಥಾನದ ಹೋಟೆಲ್ನಲ್ಲಿ ಕೊಠಡಿಗಳ ಮುಂಗಡ ಬುಕ್ಕಿಂಗ್ ವರೆಗೆ ಈಗಾಗಲೇ ಈ ಮದುವೆಗೆ ಅಂದಾಜು ಮಾಡದಷ್ಟು ಖರ್ಷು ಮಾಡಲಾಗಿದೆಯಂತೆ. ಇದನ್ನು ನೀಡಿದವರು ಯಾರು ಗೊತ್ತಾ? ಬೇರಾರು ಅಲ್ಲ- ನಟಿ ಕತ್ರಿನಾ ಕೈಫ್.
ಮದುವೆ ಅಂತ ಬಂದಾಗ ಸಾಮಾನ್ಯವಾಗಿ (ಹೆಣ್ಣು ಮತ್ತು ಗಂಡು) ಎರಡೂ ಕಡೆಯರು ಅರ್ಧ ಖರ್ಚು ನೋಡಿಕೊಳ್ಳುತ್ತಿರುತ್ತಾರೆ. ಕೆಲವು ಕಡೆಗಳಲ್ಲಿ ಮದುವೆಗೂ ಮುನ್ನ ಕೊಟ್ಟ ಮಾತಿನ ಪ್ರಕಾರ ನಡೆದುಕೊಳ್ಳುವುದೂ ಉಂಟು. ಆದರೆ, ಇದೀಗ ತಿಳಿದು ಬಂದ ಮಾಹಿತಿ ಪ್ರಕಾರ ಬಾಲಿವುಡ್ ನಟಿ ಕತ್ರಿನಾ ತಮ್ಮ ಮದುವೆಗಾಗಿ ಇಲ್ಲಿ ಶೇ. 75 ರಷ್ಟು ವೆಚ್ಚವನ್ನು ತಾವೇ ಪಾವತಿಸಲು ಮುಂದಾಗಿದ್ದಾರಂತೆ. ಮದುವೆಪೂರ್ವ ಈಗಾಗಲೇ ಕತ್ರಿನಾ ಭಾರಿ ಮೊತ್ತ ಭರಿಸಿದ್ದಾರೆ ಎನ್ನಲಾಗುತ್ತಿದೆ.