ಕರ್ನಾಟಕ

karnataka

ETV Bharat / sitara

ಸಾವಿನ ಸುಳ್ಳುಸುದ್ದಿಗೆ ಬೇಸರ ವ್ಯಕ್ತಪಡಿಸಿದ ಬಾಲಿವುಡ್ ಹಿರಿಯ ನಟಿ ಮುಮ್ತಾಜ್​​..! - undefined

ತಾನು ಸಾವನ್ನಪ್ಪಿದ್ದೇನೆ ಎಂದು ಇಲ್ಲಸಲ್ಲದ ಸುದ್ದಿ ಹಬ್ಬಿಸುತ್ತಿರುವ ಸಂಬಂಧ ಹಿರಿಯ ನಟಿ ಮುಮ್ತಾಜ್ ಬೇಸರ ವ್ಯಕ್ತಪಡಿಸಿದ್ದಾರೆ.

ಹಿರಿಯ ನಟಿ ಮುಮ್ತಾಜ್

By

Published : May 7, 2019, 11:33 PM IST

ಹಿಂದಿಯ ಬಿಂದಿಯಾ ಚಮ್ಕೇಗಿ , ಜೈ ಜೈ ಶಿವ್​ ಶಂಕರ್​​ ಫೇಮಸ್​​​ ಹಾಡುಗಳನ್ನು ಬಹಳಷ್ಟು ಮಂದಿ ಕೇಳಿರುತ್ತೀರಿ. ಈ ಸಿನಿಮಾಗಳಲ್ಲಿ ನಟಿಸಿರುವ ಮಮ್ತಾಜ್​​ ಆಗಿನ ಕಾಲದಲ್ಲಿ ಬಾಲಿವುಡ್​​​​ನಲ್ಲಿ ಭಾರೀ ಡಿಮ್ಯಾಂಡ್​​​ನಲ್ಲಿದ್ದ ನಟಿ.

1974 ರಲ್ಲಿ ಉದ್ಯಮಿ ಮಯೂರ್ ಮಾಧವನಿ ಕೈ ಹಿಡಿದ ಮುಮ್ತಾಜ್ ನಂತರ ನಟನೆ ಬಿಟ್ಟು ಲಂಡನ್​​ನಲ್ಲಿ ಸೆಟಲ್ ಆಗಿದ್ದಾರೆ. ಇದೀಗ ಮುಮ್ತಾಜ್​​ಗೆ 71 ವರ್ಷ ವಯಸ್ಸು. ಇತ್ತೀಚೆಗೆ ತಮ್ಮ ಬಗ್ಗೆ ಹಬ್ಬಿದ ರೂಮರ್ ಒಂದಕ್ಕೆ ಮುಮ್ತಾಜ್ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ರೂಮರ್ ಕೇಳಿ ಆರಂಭದಲ್ಲಿ ಅವರಿಗೆ ಬಹಳ ನಗು ಬಂತಂತೆ. ನಾನು ಲಂಡನ್​​ನಲ್ಲಿ ಸಂತೋಷವಾಗಿ ಆರೋಗ್ಯವಾಗಿ ಇದ್ದೇನೆ. ಆದರೆ ಯಾರೋ ಕಿಡಿಗೇಡಿಗಳು ನಾನು ಸಾವನ್ನಪ್ಪಿದ್ದೇನೆ ಎಂದು ಇಲ್ಲಸಲ್ಲದ ಸುಳ್ಳುಸುದ್ದಿ ಹಬ್ಬಿಸಿದ್ದಾರೆ. ನಾನು ನಟನೆಯಿಂದ ದೂರಾಗಿದ್ದೇನೆ ಅಷ್ಟೇ. ಆದರೆ ನನ್ನ ಅಭಿಮಾನಿಗಳೊಂದಿಗೆ ನಾನು ಇಂದಿಗೂ ಸಂಪರ್ಕದಲ್ಲಿದ್ದೇನೆ.

ಮುಮ್ತಾಜ್

ನಾನು ಸತ್ತಿದ್ದೇನೆ ಎಂದು ಸುಳ್ಳುಸುದ್ದಿ ಹಬ್ಬಿಸುತ್ತಿರುವುದು ಇದು ಮೊದಲ ಬಾರಿಯಲ್ಲ ಕಳೆದ ವರ್ಷ ಕೂಡಾ ನನ್ನ ಬಗ್ಗೆ ಹೀಗೇ ಸುದ್ದಿ ಹಬ್ಬಿಸಲಾಗಿತ್ತು. ಆದರೆ ಇದರಿಂದ ಅಂತವರಿಗೆ ಏನು ಸಿಗುತ್ತದೆ ಎಂದು ತಿಳಿದಿಲ್ಲ. ಇದು ಹುಲಿ ಬಂತು ಕಥೆಯಂತಾದರೆ ಕಷ್ಟ. ನಾನು ನಿಜವಾಗಿ ಸತ್ತರೂ ಯಾರೂ ನಂಬದಿರುವಂತ ಪರಿಸ್ಥಿತಿ ಬಂದರೆ ಕಷ್ಟ. ಭಾರತದಲ್ಲಿ ನನ್ನನ್ನು ಲೆಜೆಂಡ್ ಎಂದು ಕರೆಯುತ್ತಾರೆ. ಆದರೆ ಹೀಗೆ ಇಲ್ಲಸಲ್ಲದ್ದನ್ನು ಹಬ್ಬಿಸುತ್ತಾರೆ. ನಾನು ಸಾಯಬೇಕೆಂಬ ಉದ್ದೇಶದಿಂದಲೇ ಹೀಗೆ ಮಾಡುತ್ತಿದ್ದಾರೋ ಏನೋ ತಿಳಿಯುತ್ತಿಲ್ಲ ಎಂದು ತಮ್ಮ ಕುರಿತಾಗಿ ಹಬ್ಬಿರುವ ಸುದ್ದಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಮುಮ್ತಾಜ್​.

ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಮುಮ್ತಾಜ್ ಪುತ್ರಿ ತಾನ್ಯಾ ಮಾದವನಿ 'ನನ್ನ ತಾಯಿ ಆರೋಗ್ಯವಾಗಿ ಇದ್ದಾರೆ. ಸದ್ಯಕ್ಕೆ ಅವರು ಲಂಡನ್​​​ನಲ್ಲಿ ನಮ್ಮ ಜೊತೆಯೇ ಇದ್ದಾರೆ. ದಯವಿಟ್ಟು ಹೀಗೆ ಸುಳ್ಳುಸುದ್ದಿ ಹಬ್ಬಿಸಬೇಡಿ. ಇದರಿಂದ ನಮ್ಮ ಮನಸ್ಸಿಗೆ ಬಹಳ ಬೇಸರವಾಗಿದೆ' ಎಂದು ಮನವಿ ಮಾಡಿದ್ದಾರೆ.

ಮಗಳು, ಅಳಿಯನ ಜೊತೆ ಮುಮ್ತಾಜ್​​

For All Latest Updates

TAGGED:

ABOUT THE AUTHOR

...view details