ನವದೆಹಲಿ:ಸಾರಾ ಅಲಿಖಾನ್ ಹಾಗೂ ವರುಣ್ ಧವನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಕೂಲಿ ನಂ 1 ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿ ಬಿಡುಗಡೆಗೆ ಸಜ್ಜಾಗಿದ್ದು ಚಿತ್ರತಂಡ ಸಿನಿಮಾ ಪ್ರಮೋಷನ್ ಕಾರ್ಯಕ್ರಗಳಲ್ಲಿ ಬ್ಯುಸಿ ಇದೆ.
ತಮ್ಮ ಹೊಸ ಚಿತ್ರದ ಪ್ರಮೋಷನ್ ಕಾರ್ಯ ಆರಂಭಿಸಿದ ವರುಣ್ ಧವನ್ - ಸಾರಾ ಅಲಿಖಾನ್ - Coolie no 1 movie promotion
ಡೇವಿಡ್ ಧವನ್ ನಿರ್ದೇಶನದ 'ಕೂಲಿ ನಂ 1' ಸಿನಿಮಾ ಡಿಸೆಂಬರ್ 25 ರಂದು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗಲಿದೆ. ಚಿತ್ರತಂಡ ಪ್ರಮೋಷನ್ ಕಾರ್ಯಗಳಲ್ಲಿ ಬ್ಯುಸಿ ಇದ್ದು ವರುಣ್, ಸಾರಾ ಜೊತೆಗಿನ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಈ ನಡುವೆ ವರುಣ್ ಧವನ್ ಸಾರಾ ಜೊತೆಗಿನ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ವರುಣ್ ಧವನ್ ಬಿಳಿ ಬಣ್ಣದ ಟಿ ಶರ್ಟ್ ಮೇಲೆ ಹಳದಿ ಹಾಗೂ ನೀಲಿ ಮಿಶ್ರಿತ ಷರ್ಟ್ ಧರಿಸಿದ್ದರೆ. ಸಾರಾ ಅಲಿಖಾನ್ ಕೆಂಪು ಹಾಗೂ ನೀಲಿ ಬಣ್ಣದ ಸ್ಕರ್ಟ್ ಧರಿಸಿದ್ದಾರೆ. ಈ ಫೋಟೋಗಳನ್ನು ಸಾಕಷ್ಟು ಸಂಖ್ಯೆಯ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
'ಕೂಲಿ ನಂ 1' ಚಿತ್ರವನ್ನು ವಸು ಭಗ್ನಾನಿ ನಿರ್ಮಿಸಿದ್ದು ಡೇವಿಡ್ ಧವನ್ ನಿರ್ದೇಶನ ಮಾಡಿದ್ದಾರೆ. 1995 ರಲ್ಲಿ ಬಿಡುಗಡೆಯಾದ ಗೋವಿಂದ ಹಾಗೂ ಕರೀಷ್ಮಾ ಕಪೂರ್ ನಟನೆಯ 'ಕೂಲಿ ನಂ 1' ಚಿತ್ರವನ್ನು ಅದೇ ಹೆಸರಲ್ಲಿ ಮತ್ತೆ ತಯಾರಿಸಲಾಗಿದೆ. ಈ ಚಿತ್ರವನ್ನು ಕೂಡಾ ವಸು ಭಗ್ನಾನಿ ನಿರ್ಮಿಸಿ, ಡೇವಿಡ್ ಧವನ್ ನಿರ್ದೇಶಿಸಿದ್ದರು. ಈ ಸಿನಿಮಾ ಡಿಸೆಂಬರ್ 25 ರಂದು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗಲಿದೆ.