ಮುಂಬೈ: ಅಭಿಷೇಕ್ ಕಪೂರ್ ನಿರ್ದೇಶನದಲ್ಲಿ ಮೂಡಿಬರಲಿರುವ ಸಿನಿಮಾದಲ್ಲಿ ಆಯುಷ್ಮಾನ್ ಖುರಾನಾ ಮತ್ತು ವಾಣಿ ಕಪೂರ್ ನಟಿಸಲಿದ್ದಾರೆ.
ಇನ್ನೂ ಹೆಸರಿಡಬೇಕಾದ ಈ ಸಿನಿಮಾವನ್ನು "ಸುಂದರವಾದ, ಹೃದಯವನ್ನು ತುಂಬುವ ಚಿತ್ರ" ಎಂದು ವಿವರಿಸಿದ ವಾಣಿ, ಆಯುಷ್ಮಾನ್ನೊಂದಿಗೆ ನಟಿಸಲು ರೋಮಾಂಚನಗೊಂಡಿದ್ದೇನೆ ಎಂದು ಹೇಳಿದ್ದಾರೆ.
"ಆಯುಷ್ಮಾನ್ ನಮ್ಮ ಪೀಳಿಗೆಯ ಅತ್ಯಂತ ಪ್ರತಿಭಾವಂತ ನಟರಲ್ಲಿ ಒಬ್ಬರಾಗಿದ್ದಾರೆ. ಈ ಸುಂದರವಾದ ಪ್ರೇಮಕಥೆಯ ಚಿತ್ರದಲ್ಲಿ ನಾವಿಬ್ಬರು ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವುದರಿಂದ ಚಿತ್ರದ ಕುರಿತು ರೋಮಾಂಚನಗೊಂಡಿದ್ದೇನೆ" ಎಂದಿದ್ದಾರೆ.
"ನಿರ್ದೇಶಕ ಅಭಿಷೇಕ್ ಕಪೂರ್ನೊಂದಿಗೆ ಕೆಲಸ ಮಾಡಲು ನಾನು ಯಾವಾಗಲೂ ಬಯಸುತ್ತಿದ್ದೆ. ಅವರ ಚಿತ್ರಗಳಿಂದ ತುಂಬಾ ಸ್ಫೂರ್ತಿ ಪಡೆದಿದ್ದೇನೆ" ಎಂದು ವಾಣಿ ತಿಳಿಸಿದ್ದಾರೆ.
ಈ ಚಿತ್ರದಲ್ಲಿ ಆಯುಷ್ಮಾನ್ ಕ್ರಾಸ್-ಫಂಕ್ಷನಲ್ ಅಥ್ಲೀಟ್ ಆಗಿ ನಟಿಸಲಿದ್ದಾರೆ. ಈ ವರ್ಷದ ಅಕ್ಟೋಬರ್ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.