ಬಾಲಿವುಡ್ ನಟಿ ವಾಣಿ ಕಪೂರ್ ಸಪೂರ, ಬಳುಕುವ ದೇಹದಿಂದಲೇ ಹೆಸರಾದವರು. ಚಂದನವನದ ಈ ಚೆಲುವೆ ಇದೀಗ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅವರ ಹಾಟ್ ವಿಡಿಯೋವೊಂದನ್ನು ಹಂಚಿಕೊಂಡು ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.
ವಾಣಿ ಕಪೂರ್ 5.2 ಮಿಲಿಯನ್ ಫಾಲೋವರ್ಸ್ ಹೊಂದಿರುವ ಇನ್ಸ್ಟಾಗ್ರಾಮ್ನಲ್ಲಿ ತಾವು ಫೋಟೋಗೆ ಸಖತ್ ಹಾಟ್ ಆಗಿ ಫೋಸ್ ನೀಡುತ್ತಿರುವ ವಿಡಿಯೋವನ್ನು ಹರಿಬಿಟ್ಟಿದ್ದಾರೆ. ಬಿಕಿನಿ ಮಾದರಿಯ ಟಾಪ್ ಹಾಕಿಕೊಂಡಿರುವ ವಾಣಿ ಕಪೂರ್ ಫೋಟೋಗಳಿಗೆ ವಿವಿಧ ಭಂಗಿಗಳನ್ನು ಪ್ರದರ್ಶಿಸುತ್ತಿರುವುದು ವಿಡಿಯೋದಲ್ಲಿದೆ.
ಅಲ್ಲದೇ, ತಾವು ಸಿನಿಮಾಕ್ಕಾಗಿ ಮಾಡುತ್ತಿರುವ ವರ್ಕೌಟ್ ಕೂಡ ಇದರಲ್ಲಿದೆ. 'ಜನರು ಚಿನ್ನದ ಹುಡುಕಾಟದಲ್ಲಿ ಬೆಳ್ಳಿಯ ಗೆರೆಗಳನ್ನು ಮರೆಯುತ್ತಾರೆ' ಎಂದು ಈ ವಿಡಿಯೋಗೆ ಕ್ಯಾಪ್ಷನ್ ನೀಡಿದ್ದಾರೆ.