ಕರ್ನಾಟಕ

karnataka

ETV Bharat / sitara

ಇನ್ನೊಂದು ಸಾರಿ ಪಾಂಡ್ಯ ಮಾಜಿ ಪ್ರೇಯಸಿ ಅಂದ್ರೆ ಹುಷಾರ್​​​​... ನಟಿ ವಾರ್ನಿಂಗ್​! - ಹಾರ್ದಿಕ್​ ಪಾಂಡ್ಯಾ ಸುದ್ದಿ

ಇನ್ನೊಂದು ಬಾರಿ ನೀವು ಪಾಂಡ್ಯ ಮಾಜಿ ಪ್ರಿಯಸಿ ಅಂದ್ರೆ ನೆಟ್ಟಗಿರಲ್ಲ ಎಂದು ಬಾಲಿವುಡ್​ ನಟಿ ಖಡಕ್​ ಆಗಿಯೇ ಮಾಧ್ಯಮಕ್ಕೆ ವಾರ್ನಿಂಗ್​ ನೀಡಿದ್ದಾರೆ.

ಕೃಪೆ: Twitter

By

Published : Jul 30, 2019, 10:54 AM IST

ಹೌದು, ಇತ್ತಿಚೇಗೆ ಹಿಂದಿ ಪತ್ರಿಕೆಯೊಂದು ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಬಾಲಿವುಡ್​ ನಟಿ ಊರ್ವಶಿ ಮಾಜಿ ಲವರ್​ ಎಂದು ಸುದ್ದಿ ಪ್ರಕಟಿಸಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಕೂಡಾ ಆಗಿತ್ತು

ಕೃಪೆ: Twitter

ಈ ವೈರಲ್​ ಸುದ್ದಿ ನೋಡಿದ ನಟಿ ಊರ್ವಶಿ ಸಿಕ್ಕಾಪಟ್ಟೆ ಸಿಟ್ಟು ಮಾಡಿಕೊಂಡಿದ್ದಾರೆ. ಚಾನೆಲ್​ಗಳು ಇಂತಹ ಹುಚ್ಚು ಸುದ್ದಿಗಳನ್ನು ಪ್ರಸಾರ ಮಾಡ್ಬೇಡಿ. ಇದರಿಂದ ಕೌಟುಂಬಿಕ ಕಲಹಗಳು ಎದುರಾಗುತ್ತವೆ. ನಾಳೆ ಏನಾದ್ರೂ ಆದ್ರೆ, ನನ್ನ ಕುಟುಂಬಕ್ಕೆ ನಾನು ಉತ್ತರಿಸಲು ಸಾಧ್ಯವಿಲ್ಲ. ಈ ರೀತಿ ಹುಚ್ಚು ಸುದ್ದಿಗಳನ್ನ ಹಬ್ಬಿಸಬೇಡಿ’ ಎಂದು ನಟಿ ಊರ್ವಶಿ ಖಡಕ್ಕಾಗಿಯೇ ವಾರ್ನಿಂಗ್​ ಮಾಡಿದ್ದಾರೆ.

ಈ ಹಿಂದೆ ಪಾರ್ಟಿಗಳಿಗೆ ಊರ್ವಶಿ ಮತ್ತು ಪಾಂಡ್ಯ ಜೊತೆಯಾಗಿಯೇ ಹೋಗುತ್ತಿದ್ದರು. ಇದರಿಂದ ಅವರು ಡೇಟಿಂಗ್​ನಲ್ಲಿದ್ದಾರೆ ಎಂದು ಸುದ್ದಿಗಳು ಹಬ್ಬುತ್ತಿದ್ದವು. ಈಗ ನಟಿಯ ವಾರ್ನಿಂಗ್​ನಿಂದ ಅವರ ಮಧ್ಯೆ ಯಾವುದೇ ಸಂಬಂಧ ಇಲ್ಲವೆಂದು ಕಾಣುತ್ತಿದೆ ಎಂದು ಮಾಧ್ಯಮಗಳು ವಿಶ್ಲೇಷಣೆ ಮಾಡಿವೆ.

ABOUT THE AUTHOR

...view details