ಕರ್ನಾಟಕ

karnataka

ETV Bharat / sitara

ನಟಿ ಊರ್ವಶಿ ಹೊಟ್ಟೆಗೆ ಪಂಚ್​ ನೀಡುವ ಜಿಮ್​ ಟ್ರೇನರ್: ಬಾಲಿವುಡ್​ ಬೆಡಗಿಯ ಔಟ್​ಫಿಟ್​ಗೆ ನೆಟ್ಟಿಗರು ಫಿದಾ - ನಟಿ ಊರ್ವಶಿ ರೌತೆಲಾ ವಿಡಿಯೋ ಸುದ್ದಿ

ಕಪ್ಪು ಬಟ್ಟೆ ತೊಟ್ಟು ನಿಂತ ಊರ್ವಶಿಯ ಹೊಟ್ಟೆಗೆ ಅವಳ ತರಬೇತುದಾರ ಪದೇ ಪದೇ ಪಂಚ್​ ನೀಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನಸೆಳೆಯುತ್ತಿದೆ.

Slug Viral alert: Urvashi Rautela gets punched 'right in the gut' - video
ನಟಿ ಊರ್ವಶಿ ರೌತೆಲಾ ಹೊಟ್ಟೆಗೆ ಪಂಚ್​ ನೀಡುವ ಜಿಮ್​ ಟ್ರೇನರ್

By

Published : Jun 11, 2021, 1:10 PM IST

ಹೈದರಾಬಾದ್:ನಟಿ ಊರ್ವಶಿ ರೌತೆಲಾ ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ಹಂಚಿಕೊಂಡ ವಿಡಿಯೋ ನೆಟ್ಟಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ಜಿಮ್​ ತರಬೇತುದಾರರು ಊರ್ವಶಿ ಹೊಟ್ಟೆಗೆ ಪಂಚ್​ ಕೊಡುವ ವಿಡಿಯೋ ಇದಾಗಿದೆ. ಜಿಮ್​ ಔಟ್​ಫಿಟ್​ನಲ್ಲಿ ರೌತೆಲಾ ಬ್ಯೂಟಿಗೆ ನೋಡುಗರು ಮನಸೋತಿದ್ದಾರೆ.

ಕಪ್ಪು ಬಟ್ಟೆ ತೊಟ್ಟು ನಿಂತ ಊರ್ವಶಿಯ ಹೊಟ್ಟೆಗೆ ಅವಳ ತರಬೇತುದಾರ ಪದೇ ಪದೇ ಪಂಚ್​ ನೀಡುತ್ತಾರೆ. ಈ ದೃಶ್ಯ ಪೋಸ್ಟ್​ ಮಾಡಿರುವ ನಟಿ, "ನೋ ಪೇನ್ ನೋ ಗೇನ್ ಎಂದು ಕ್ಯಾಪ್ಶನ್​ ನೀಡಿದ್ದಾರೆ.

ಇದನ್ನೂ ಓದಿ:ತೆಲುಗಿನ ಖ್ಯಾತ​ ನಟರೊಂದಿಗೆ ನಟಿಸಲಿದ್ದಾರಾ ಶ್ರೀದೇವಿ ಮಗಳು?

"ಇದು ನನ್ನ ಆಕ್ಷನ್ ಫಿಲ್ಮ್‌ನ ಒಂದು ಭಾಗವಾಗಿದೆ" ಎಂದು ಊರ್ವಶಿ ಹೇಳಿದ್ದಾರೆ. ಪ್ರಸ್ತುತ 803K ಜನ ಈ ವಿಡಿಯೋ ವೀಕ್ಷಿಸಿದ್ದಾರೆ.

ಆ್ಯಕ್ಷನ್ ಚಿತ್ರಕ್ಕಾಗಿ ಅಭ್ಯಾಸ ಮಾಡುತ್ತಿರುವುದಾಗಿ ನಟಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ರಣದೀಪ್ ಹೂಡಾ ಅವರೊಂದಿಗೆ ‘ಇನ್ಸ್‌ಪೆಕ್ಟರ್ ಅವಿನಾಶ್’ ಎಂಬ ವೆಬ್ ಸರಣಿಯಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಸೂಪರ್‌ಕಾಪ್, ಇನ್ಸ್‌ಪೆಕ್ಟರ್ ಅವಿನಾಶ್ ಮಿಶ್ರಾ ಅವರ ಪತ್ನಿ ಪೂನಮ್ ಮಿಶ್ರಾ ಪಾತ್ರದಲ್ಲಿ ಊರ್ವಶಿ ನಟಿಸಿದ್ದಾರೆ.

ABOUT THE AUTHOR

...view details