ಮುಂಬೈ (ಮಹಾರಾಷ್ಟ್ರ):ಕಳೆದ ಎರಡು ವಾರಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿದ್ದ ನಟಿ ಕಂ ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ (Urmila Matondkar) ಚೇತರಿಸಿಕೊಂಡಿದ್ದಾರೆ. COVID-19 ನಿಂದ ಹೊರ ಬಂದ ನಟಿಯು, ತಮ್ಮ ಅಧಿಕೃತ ಟ್ವಿಟರ್ (Twitter) ಮೂಲಕ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.
ನಾನು ಭಾನುವಾರ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದು ನೆಗೆಟಿವ್ ವರದಿ ಕಾಣಿಸಿಕೊಂಡಿದೆ. ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ. ನನ್ನ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದ ಹಾಗೂ ನನಗಾಗಿ ಮುತುವರ್ಜಿ ವಹಿಸಿಕೊಂಡಿದ್ದ ನನ್ನ ಎಲ್ಲ ಹಿತೈಷಿಗಳಿಗೆ ಧನ್ಯವಾದಗಳನ್ನು ಅರ್ಪಿಸುವೆ ಎಂದಿದ್ದಾರೆ.
ಯಾರಾದರೂ ಇನ್ನೂ ಲಸಿಕೆಯನ್ನು ತೆಗೆದುಕೊಳ್ಳದಿದ್ದರೆ ದಯವಿಟ್ಟು ತ್ವರಿತವಾಗಿ ಲಸಿಕೆಯನ್ನು (Please get vaccinated fast) ಪಡೆಯಿರಿ. ಮೊದಲ ಡೋಸ್ ಪಡೆದಿದ್ದರೆ ದಯವಿಟ್ಟು ಎರಡನೆಯದನ್ನು ತೆಗೆದುಕೊಳ್ಳಿ. ವೈರಸ್‌ಗೆ (virus) ತುತ್ತಾದರೆ ಲಸಿಕೆ ನಿಮ್ಮನ್ನು ಸೋಂಕಿನಿಂದ ಪಾರು ಮಾಡಬಲ್ಲದು. COVID-19 ವಿರುದ್ಧ ಹೋರಾಡಲು ಇದೊಂದೇ ಪರಿಹಾರ (solution) ಎಂದಿದ್ದಾರೆ.