ಈ ವಾರದ ಆರಂಭದಲ್ಲಿ ಧನುಷ್ ಮತ್ತು ಐಶ್ವರ್ಯ ಅವರು 18 ವರ್ಷಗಳ ದಾಂಪತ್ಯದ ನಂತರ ಬೇರ್ಪಡುವುದಾಗಿ ಘೋಷಿಸಿದ್ದರು. ಅವರ ಹೇಳಿಕೆಯನ್ನು ಅನುಸರಿಸಿ, ನಿರ್ದೇಶಕ ರಾಮ್ಗೋಪಾಲ್ ವರ್ಮಾ ಅವರು ಮದುವೆಯ ಬಗ್ಗೆ ಸರಣಿ ಟ್ವೀಟ್ ಮಾಡಿದ್ದರು. ಆರ್‌ಜಿವಿ ಹೇಳಿಕೆಗೆ ನಟಿ ಉರ್ಫಿ ಜಾವೇದ್ ಕೆಂಡಾಮಂಡಲಾಗಿದ್ದಾರೆ.
ಯುವಕರು ಮದುವೆ ಮಾಡಿಕೊಳ್ಳಬೇಕೇ ಅಥವಾ ಬೇಡವೇ ಎಂಬುದಕ್ಕೆ ಸ್ಟಾರ್ ದಂಪತಿಗಳ ವಿಚ್ಛೇದನ ಪ್ರಕರಣಗಳು ಮಾದರಿಯಾಗಿವೆ. ಮದುವೆಯಾಗಿ 'ಜೈಲು' ಸೇರುವ ಬದಲು, ಇಬ್ಬರು ಪರಸ್ಪರ ಪ್ರೀತಿಯಲ್ಲೇ ಜೀವನ ಸಾಗಿಸುವುದೇ ಸಂತೋಷದ ರಹಸ್ಯವಾಗಿದೆ. ಮದುವೆಯಾದ ದಂಪತಿ ಪ್ರೀತಿಯಲ್ಲಿ ಕಾಣುವ ಸುಖದ ದಿನಗಳು ಹೆಚ್ಚೆಂದರೆ 4 ರಿಂದ 5 ದಿನ. ಆದರೆ, ಪ್ರೀತಿ ಮಾಡುವವರು ದಿನವೂ ಸುಖಿಸುತ್ತಾರೆ.
ಅಲ್ಲದೇ, ಬುದ್ಧಿಹೀನರು ಮದುವೆಯಾದರೆ, ವಿವೇಕಿಗಳು ಬರೀ ಪ್ರೀತಿಸುತ್ತಾರೆ. ವಿವಾಹ ವಿಚ್ಛೇದನಗಳನ್ನು ಸಂಭ್ರಮದಿಂದ ಆಚರಿಸಬೇಕು. ಮದುವೆ ಎಂಬ ಅತೃಪ್ತಿ ಮತ್ತು ದುಃಖದ ಸಂಕೋಲೆಯನ್ನು ನಮ್ಮ ಪೂರ್ವಜರು ನಮ್ಮ ಮೇಲೆ ಬಿಟ್ಟು ಹೋಗಿದ್ದಾರೆ. ಮದುವೆ ಎಂಬುದು ಸಮಾಜದ ಮೇಲೆ ಹೇರಲಾದ ಅತ್ಯಂತ ಕೆಟ್ಟ ಪದ್ಧತಿಯಾಗಿದೆ ಎಂದು ಆರ್‌ಜಿವಿ ಸರಣಿ ಟ್ವೀಟ್ಗಳ ಮೂಲಕ ಟೀಕಿಸಿದ್ದರು.
ಓದಿ:ಸ್ಫೋಟಕ ವಸ್ತುಗಳು ಸಾಗಿಸುತ್ತಿದ್ದ ಲಾರಿಗೆ ಬೈಕ್ ಡಿಕ್ಕಿ.. ನೂರಾರು ಮನೆಗಳು ನಾಶ, 17 ಮಂದಿ ಸಾವು