ಮುಂಬೈ:ಟಿವಿ ಸೆಲೆಬ್ರೆಟಿ, ಒಟಿಟಿ ಬಿಗ್ಬಾಸ್ ಖ್ಯಾತಿಯ ಜನಪ್ರಿಯ ಕಿರುತೆರೆ ನಟಿ ಉರ್ಫಿ ಜಾವೇದ್, ಆಗಾಗ ಬೋಲ್ಡ್ ಮತ್ತು ಹಾಟ್ ಫೋಟೋ ಹಂಚಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡುತ್ತಾರೆ. ವಿಭಿನ್ನ ಜೊತೆಗೆ ಕೊಂಚ ವಿಚಿತ್ರ ವೇಷಭೂಷಣಕ್ಕೆ ಹೆಸರಾಗಿರುವ ಉರ್ಫಿ, ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಮುನ್ನೆಲೆಗೆ ಬಂದಿರುವುದು ಬಟ್ಟೆ ವಿಚಾರಕ್ಕೆ ಅಲ್ಲ, ಸೆಕ್ಯುರಿಟಿ ಗಾರ್ಡ್ ಜೊತೆ ಜಗಳ ಮಾಡಿದ್ದಾರೆ ಎಂಬ ಕಾರಣಕ್ಕೆ.
ಮುಂಬೈನಲ್ಲಿ ಆಯೋಜಿಸಿದ್ದ ಖಾಸಗಿ ಕಾರ್ಯಕ್ರಮಕ್ಕೆ ಉರ್ಫಿಯನ್ನು ಅಥಿತಿಯಾಗಿ ಆಹ್ವಾನಿಸಲಾಗಿತ್ತು. ಸಮಾರಂಭಕ್ಕೆ ಉರ್ಫಿ ಹಾಟ್ ಅವತಾರದಲ್ಲಿ ಆಗಮಿಸಿದ್ದರು. ಈ ವೇಳೆ, ಅಲ್ಲಿನ ಸೆಕ್ಯುರಿಟಿ ಗಾರ್ಡ್ ಉರ್ಫಿ ಮತ್ತು ಮಾಧ್ಯಮ ಪ್ರತಿನಿಧಿಗಳನ್ನು ಒಳಗೆ ತೆರಳದಂತೆ ತಡೆದಿದ್ದರು. ಇದರಿಂದ ಕೋಪಗೊಂಡ ಉರ್ಫಿ, ಆತನೊಂದಿಗೆ ಜಗಳವಾಡಿದ್ದಾರೆ.