ನವದೆಹಲಿ:ರಣವೀರ್ ಸಿಂಗ್ ಅಭಿನಯದ ಸೂಪರ್ ಹಿಟ್ ಚಿತ್ರ 'ಗಲ್ಲಿ ಬಾಯ್' 92ನೇ ಆಸ್ಕರ್ ಪ್ರಶಸ್ತಿಗೆ ಅಧಿಕೃತವಾಗಿ ಎಂಟ್ರಿ ಕೊಟ್ಟಿರುವುದಕ್ಕೆ ಟ್ಟಿಟ್ಟರ್ನಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದ್ದು, ಟ್ವಿಟ್ಟರ್ನಲ್ಲಿ ಟಾಪ್ ಟ್ರೆಂಡಿಂಗ್ನಲ್ಲಿದೆ.
2020ರ ಆಸ್ಕರ್ ಪ್ರಶಸ್ತಿಗೆ ಗಲ್ಲಿ ಬಾಯ್ ಚಿತ್ರ ಎಂಟ್ರಿ ಕೊಟ್ಟಿರುವ ಬಗ್ಗೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದು, ಚಿತ್ರತಂಡಕ್ಕೆ ತಹರೇವಾರಿ ಟ್ವೀಟ್ಗಳ ಮೂಲಕ ಶುಭಾಷಯ ಕೋರಿದ್ದಾರೆ. ಗಲ್ಲಿ ಬಾಯ್ ಭಾರತದಿಂದ ಅಧಿಕೃತವಾಗಿ ಆಸ್ಕರ್ ಪ್ರಶಸ್ತಿಗೆ ಎಂಟ್ರಿ ಕೊಟ್ಟಿದೆ. ಚಿತ್ರವು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿರುವುದನ್ನು ನೋಡಲು ಬಹಳ ಸಂತಸವಾಗುತ್ತಿದೆ. ಅಪ್ನಾ ಟೈಂ ಆಗಯಾ ಎಂದು ರಣವೀರ್ ಸಿಂಗ್ಗೆ ಟ್ಯಾಗ್ ಮಾಡುವ ಮೂಲಕ ಅಭಿಮಾನಿಯೋರ್ವ ಟ್ವೀಟ್ ಮಾಡಿದ್ದಾನೆ. ಇನ್ನು ಚಿತ್ರ ತಂಡಕ್ಕೆ ಸಿನಿಮಾ ರಂಗದ ದಿಗ್ಗಜರು ಸೇರಿದಂತೆ ಕೋಟ್ಯಂತರ ಮಂದಿ ಅಭಿಮಾನಿಗಳಿಂದ ಅಭಿನಂದನೆ ವ್ಯಕ್ತವಾಗಿದೆ.