ಮುಂಬೈ : ಬಾಲಿವುಡ್ನ ಆ್ಯಕ್ಷನ್ ಕಿಂಗ್ ಅಕ್ಷಯ್ಕುಮಾರ್ ಮಡದಿ ಟ್ವಿಂಕಲ್ ಖನ್ನಾ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 48ನೇ ವಸಂತಕ್ಕೆ ಕಾಲಿಟ್ಟ ಟ್ವಿಂಕಲ್ ಖನ್ನಾ ತನ್ನ ತಂದೆಯೊಂದಿಗಿನ ಅಪರೂಪದ ಫೋಟೋ ಹಂಚಿಕೊಂಡಿದ್ದಾರೆ.
ಟ್ವಿಂಕಲ್ ಖನ್ನಾ 48ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇದರಲ್ಲಿ ಮತ್ತೊಂದು ವಿಶೇಷ ಅಂದರೆ ಇಂದೇ ಟ್ವಿಂಕಲ್ ಖನ್ನಾ ಅವರ ತಂದೆ ದಿವಂಗತ ರಾಜೇಶ್ ಖನ್ನಾ ಅವರ ಹುಟ್ಟುಹಬ್ಬವೂ ಹೌದು. ಹಾಗಾಗಿ, ಟ್ವಿಂಕಲ್ ಖನ್ನಾ ತನ್ನ ತಂದೆಯೊಂದಿಗಿನ ಚಿಕ್ಕ ವಯಸ್ಸಿನ ಕಪ್ಪು ಬಿಳುಪಿನ ಫೋಟೋವೊಂದನ್ನ ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಶೇರ್ ಮಾಡಿದ್ದಾರೆ.
"ಅವರ ಜನ್ಮದಿನದಂದು ನಾನು ಜಗತ್ತಿಗೆ ಕಾಲಿಟ್ಟೆ. ಅವರು, 'ನನ್ನ ಜೀವನದ ಅತ್ಯುತ್ತಮ ಉಡುಗೊರೆ ನೀನು' ಎಂದು ಯಾವಾಗಲೂ ಹೇಳುತ್ತಿದ್ದರು. ದೊಡ್ಡ ನಕ್ಷತ್ರಪುಂಜವನ್ನು ನೋಡುತ್ತಿರುವ ಪುಟ್ಟ ನಕ್ಷತ್ರ ನೀನು. ಇದು ನಮ್ಮ ಒಟ್ಟಿಗಿನ ಜನ್ಮದಿನ, ಈಗ ಮತ್ತು ಎಂದೆಂದಿಗೂ." ಎಂದು ಬರೆದುಕೊಂಡಿದ್ದಾರೆ.
ಮಂಗಳವಾರ ಸೂಪರ್ಸ್ಟಾರ್ ರಾಜೇಶ್ ಖನ್ನಾ ಅವರ 79ನೇ ಜನ್ಮ ವಾರ್ಷಿಕೋತ್ಸವದ ಮುನ್ನಾದಿನದಂದು, ನಿರ್ಮಾಪಕ ನಿಖಿಲ್ ದ್ವಿವೇದಿ ಅವರು ಅಪ್ರತಿಮ ತಾರೆಯ ಮೇಲೆ ಬಯೋಪಿಕ್ ಮಾಡುವುದಾಗಿ ಘೋಷಿಸಿದ್ದಾರೆ.
ಈ ಚಿತ್ರವು ಗೌತಮ್ ಚಿಂತಾಮಣಿ ಅವರ ಬೆಸ್ಟ್ ಸೆಲ್ಲರ್ ಡಾರ್ಕ್ ಸ್ಟಾರ್: ದಿ ಲೋನ್ಲಿನೆಸ್ ಆಫ್ ಬೀಯಿಂಗ್ ರಾಜೇಶ್ ಖನ್ನಾ ಕೃತಿ ಆಧರಿಸಿದ ಚಿತ್ರವಾಗಿದೆ. ಟ್ವಿಂಕಲ್ ತಮ್ಮ 48ನೇ ಹುಟ್ಟುಹಬ್ಬವನ್ನು ಮಾಲ್ಡೀವ್ಸ್ನಲ್ಲಿ ತನ್ನ ಪತಿ ನಟ ಅಕ್ಷಯ್ ಕುಮಾರ್ ಮತ್ತು ಮಗಳು ನಿತಾರಾ ಅವರೊಂದಿಗೆ ಆಚರಿಸುತ್ತಿದ್ದಾರೆ.