ನಿನ್ನೆ ನಡೆದ ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಮುಗ್ಗರಿಸಿತು. ವಿಶ್ವಕಪ್ ಎತ್ತಿ ಹಿಡಿಯುವ ಭಾರತ ಕ್ರಿಕೆಟ್ ತಂಡದ ಕನಸು ಸೆಮಿಹಂತದಲ್ಲೇ ಕಮರಿತು. ವಿಶ್ವಕಪ್ ರೇಸ್ನಿಂದ ಹೊರಬಿದ್ದಿರುವ ಕೊಹ್ಲಿ ಪಡೆಗೆ ಕ್ರಿಕೆಟ್ ಪ್ರೇಮಿಗಳು ಸಾಂತ್ವಾನ ಹೇಳುತ್ತಿದ್ದಾರೆ. ಬಾಲಿವುಡ್ ಹಾಗೂ ಟಾಲಿವುಡ್ ನಟಿ ಪೂಜಾ ಹೆಗಡೆ ಕೂಡ ನಿನ್ನೆಯ ಪಂದ್ಯದ ಬಗ್ಗೆ ಟ್ವಿಟರ್ಲ್ಲಿ ಬರೆದುಕೊಂಡು, ಎಂ.ಎಸ್.ಧೋನಿ ಬ್ಯಾಟಿಂಗ್ನ್ನು ಹಾಡಿ ಹೊಗಳಿದ್ದರು.
ಟ್ವೀಟ್ ಟ್ರಬಲ್ : ಧೋನಿ ಹೊಗಳಿ ಟೀಕೆಗೆ ಗುರಿಯಾದ ನಟಿ ಪೂಜಾ ಹೆಗಡೆ - ಧೋನಿ ಹೊಗಳಿ
ಬಾಲಿವುಡ್ ನಟಿ ಪೂಜಾ ಹೆಗಡೆ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಧೋನಿ ಕುರಿತು ಇವರು ಮಾಡಿರುವ ಪೋಸ್ಟ್ಗೆ ಟ್ವಿಟರ್ನಲ್ಲಿ ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾಗಿದೆ.
'ನೀವು ನನ್ನ ಮೆಚ್ಚಿನ ಆಟಗಾರ ಏಕೆ ಎಂಬುದನ್ನು ಇವತ್ತು ಸಾಬೀತು ಪಡಿಸಿದಿರಿ ಎಂದಿರುವ ಪೂಜಾ, ಪ್ರತಿ ಪಂದ್ಯಗಳ ಗೆಲುವಿಗೆ ಧೋನಿ ಅವರು ಕಠಿಣ ಪರಿಶ್ರಮ ನೀಡುತ್ತಾರೆ. ಅವರಿಗೆ ನನ್ನ ಪ್ರೀತಿ ಮತ್ತು ಗೌರವ ಸಲ್ಲಿಸುತ್ತೇನೆ' ಎಂದು ಪೋಸ್ಟ್ ಮಾಡಿದ್ದಾರೆ. ಅವರ ಈ ಹೊಗಳಿಕೆ ಮೆಚ್ಚುಗೆ ಪಡೆಯುವುದರ ಬದಲು ಸಾಕಷ್ಟು ವಿರೋಧ ಪಡೆದುಕೊಂಡಿದೆ. ಸಾಕಷ್ಟು ನೆಟಿಜನ್ಗಳು ಧೋನಿ ಹೊಗಳಿಕೆಯನ್ನು ಅರಗಿಸಿಕೊಂಡಿಲ್ಲ. ನಟಿಯ ವಿರುದ್ಧ ಕಾಮೆಂಟ್ ಮಾಡಿರುವ ಅವರು, ನಿನ್ನೆ ಪಂದ್ಯ ಸೋಲಲು ಧೋನಿ ಕೂಡ ಪ್ರಮುಖ ಕಾರಣ. ಅವರ ಮಂದಗತಿಯ ಆಟವೇ ಭಾರತ ತಂಡ ಕಿವೀಸ್ ವಿರುದ್ಧ ಮಂಡಿಯೂರಲು ಕಾರಣ ಎಂದು ತೆಗಳಿದ್ದಾರೆ.