ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾದ ಕ್ರಿಮಿನಲ್ ದೂರಿನ ಸಂಬಂಧಿಸಿದಂತೆ ನಿರ್ಮಾಪಕಿ ಏಕ್ತಾ ಕಪೂರ್ ಪ್ರತಿಕ್ರಿಯಿಸಿದ್ದಾರೆ.
ಏಕ್ತಾ ಕಪೂರ್, ಸಲ್ಮಾನ್ ಖಾನ್, ಕರಣ್ ಜೋಹರ್, ಆದಿತ್ಯ ಚೋಪ್ರಾ, ಸಾಜಿದ್ ನಾಡಿಯಾಡ್ವಾಲಾ, ಭೂಷಣ್ ಕುಮಾರ್ ಮತ್ತು ಸಂಜಯ್ ಲೀಲಾ ಬನ್ಸಾಲಿ ವಿರುದ್ಧ ಬುಧವಾರ ಬೆಳಗ್ಗೆ ಮುಜಾಫರ್ ಪುರ್ ನ್ಯಾಯಾಲಯದಲ್ಲಿ 306, 109, 504 ಮತ್ತು 506 ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಮುಖ ಬಾಲಿವುಡ್ ವ್ಯಕ್ತಿಗಳ ಪಿತೂರಿಯೇ ಸುಶಾಂತ್ ಆತ್ಮಹತ್ಯೆಗೆ ಕಾರಣ ಎಂದು ಓಜಾ ಆರೋಪಿಸಿದ್ದು, ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ದೂರಿನಲ್ಲಿ ಹೇಳಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿರುವ ಏಕ್ತಾ ಕಪೂರ್, ಸುಶಾಂತ್ನನ್ನು ಪರಿಚಯಸಿದಕ್ಕಾಗಿ ಧನ್ಯವಾದಗಳು. ನಿಜವಾಗಿ ನಾನು ಅವನು ಸಿನಿಮಾ ಜೀವನ ಪ್ರಾರಂಭಿಸಿದಾಗ, ಸುರುಳಿಯಾಕಾರದ ಸಿದ್ಧಾಂತಗಳು ಹೇಗೆ ಇರಬಹುದೆಂದು ನಾನು ಅಸಮಾಧಾನಗೊಂಡಿದ್ದೇನೆ. ದಯವಿಟ್ಟು ಅವರ ಕುಟುಂಬ ಮತ್ತು ಸ್ನೇಹಿತರು ಶಾಂತಿಯಿಂದ ಇರಲು ಬಿಡಿ, ಅಂತಿಮವಾಗಿ ಸತ್ಯವೆ ಮೇಲುಗೈ ಸಾಧಿಸುತ್ತದೆ. ಇದನ್ನ ನನಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.