ಕರ್ನಾಟಕ

karnataka

ETV Bharat / sitara

ದಿ ಫ್ಯಾಮಿಲಿ ಮ್ಯಾನ್ 2ನಲ್ಲಿ ತಮಿಳರ ಸಂಸ್ಕೃತಿ ಅವಮಾನಿಸಿಲ್ಲ: ಮನೋಜ್ ಬಾಜಪೇಯಿ - ದಿ ಫ್ಯಾಮಿಲಿ ಮ್ಯಾನ್ 2

ನಟ ಮನೋಜ್ ಬಾಜಪೇಯಿ ತಮ್ಮ ಮುಂಬರುವ ವೆಬ್ ಸರಣಿ ದಿ ಫ್ಯಾಮಿಲಿ ಮ್ಯಾನ್ 2 ನಲ್ಲಿ ತಮಿಳರನ್ನು ಕೆಟ್ಟವರು ಮತ್ತು ಎಲ್‌ಟಿಟಿಇಯನ್ನು ಭಯೋತ್ಪಾದಕರಂತೆ ಚಿತ್ರಿಸಿದ್ದಾರೆ ಎಂಬ ಆರೋಪದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಮನೋಜ್ ಬಾಜಪೇಯಿ
ಮನೋಜ್ ಬಾಜಪೇಯಿ

By

Published : May 26, 2021, 3:49 PM IST

ಹೈದರಾಬಾದ್​: ದಿ ಫ್ಯಾಮಿಲಿ ಮ್ಯಾನ್ 2ನ್ನು ತಮಿಳು ಪ್ರೇಕ್ಷಕರು ವೀಕ್ಷಿಸಲಿ. ತಮಿಳು ಸಂಸ್ಕೃತಿಗೆ ಅಗೌರವ ತೋರುವ ಯಾವುದೇ ಕೆಲಸವನ್ನು ಮಾಡಿಲ್ಲ ಎಂದು ಮನೋಜ್ ಬಾಜಪೇಯಿ ಹೇಳಿದ್ದಾರೆ.

ಅಮೆಜಾನ್ ಪ್ರೈಮ್ ವಿಡಿಯೋದ ಹಿಟ್ ವೆಬ್ ಸರಣಿ ದಿ ಫ್ಯಾಮಿಲಿ ಮ್ಯಾನ್ ಲೀಡ್​ ರೋಲ್​ನಲ್ಲಿರುವ ಮನೋಜ್ ಬಾಜಪೇಯಿ, ತಮಿಳು ಜನರನ್ನು "ಹೆಚ್ಚು ಆಕ್ಷೇಪಾರ್ಹ ರೀತಿಯಲ್ಲಿ" ತೋರಿಸಲಾಗಿದೆ ಸರಣಿಯ ಎರಡನೇ ಭಾಗವನ್ನು​ ನಿಷೇಧಿಸುವ ಆಗ್ರಹಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿರುವ ಅವರು, ದಿ ಫ್ಯಾಮಿಲಿ ಮ್ಯಾನ್ ಸೀಸನ್ 2 ನೋಡಿದ್ರೆ ಎಲ್ಲರೂ ಹೆಮ್ಮೆ ಪಡುತ್ತಾರೆ.

ತಮಿಳು ಸಂಸ್ಕೃತಿಯ ಬಗ್ಗೆ ಅಪಾರ ಗೌರವ ಹೊಂದಿರುವ ನಿರ್ದೇಶಕರು, ರಾಜ್ ಮತ್ತು ಡಿಕೆ, ನಟಿಯರಾದ ಪ್ರಿಯಾಮಣಿ ಮತ್ತು ಸಮಂತಾ ಅಕ್ಕಿನೇನಿ ಮತ್ತು ಬರಹಗಾರ ಸುಮನ್ ಸೇರಿದಂತೆ ತಮಿಳರ ಪ್ರಾಬಲ್ಯವಿರುವ ತಂಡವು ಉತ್ತಮವಾಗಿ ಸೀಸನ್ 2​ ನಿರ್ಮಿಸಿದ್ದಾರೆ. ತಮಿಳು ಸಂಸ್ಕೃತಿ ಮತ್ತು ಸಂವೇದನೆಗಳ ಬಗ್ಗೆ ತಮ್ಮ ಗೌರವ ತೋರಿಸಲು ಎಲ್ಲವನ್ನು ಮಾಡಿದ್ದಾರೆ. ದಯವಿಟ್ಟು ವೆಬ್ ಸರಣಿ ದಿ ಫ್ಯಾಮಿಲಿ ಮ್ಯಾನ್ 2 ನೋಡಿ ಎಂದು ಮನವಿ ಮಾಡಿದ್ದಾರೆ.

ABOUT THE AUTHOR

...view details