ಮುಂಬೈ:ಅಲ್ಲಾಕ್ ಬಳಿಕ ಸಿನಿಮಾ ಚಿತ್ರೀಕರಣ ಆರಂಭವಾಗಿದ್ದು, ಅಮಿರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಹ ಚಿತ್ರೀಕರಣದಲ್ಲಿ ತೊಡಗಿದೆ. ಈ ನಡುವೆ ಚಡ್ಡಾ ಸಿನಿಮಾದಲ್ಲಿ ನನ್ನ ಭಾಗದ ಚಿತ್ರೀಕರಣ ಮುಗಿಸಿರುವುದಾಗಿ ನಟಿ ಕರೀನಾ ಕಪೂರ್ ಖಾನ್ ತಿಳಿಸಿದ್ದಾರೆ.
1994ರಲ್ಲಿ ಬಿಡುಗಡೆಯಾಗಿದ್ದ ಥೋಮ್ ಹ್ಯಾಂಕ್ಸ್ ನಟನೆಯ ಫಾರೆಸ್ಟ್ ಗಂಪ್ ಚಿತ್ರದ ರಿಮೇಕ್ ಆಗಿರುವ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಅಮಿರ್ ಖಾನ್ ನಟಿಸುತ್ತಿದ್ದು, ಕರೀನಾ ಸಹ ಕಾಣಿಸಿಕೊಂಡಿದ್ದಾರೆ.
ಕರೀನಾ ಆಗಸ್ಟ್ನಲ್ಲಿ ತಾನು 2ನೇ ಬಾರಿ ಗರ್ಭಿಣಿಯಾಗಿರುವುದನ್ನು ಘೋಷಿಸಿಕೊಂಡ ಬಳಿಕವೂ ಚಿತ್ರದ ಶೂಟಿಂಗ್ನಲ್ಲಿ ಭಾಗಿಯಾಗಿದ್ದರು. 40 ವರ್ಷದ ನಟಿ ಈ ಕುರಿತು ತನ್ನ ಇನ್ಸ್ಸ್ಟಾಗ್ರಾಮ್ನಲ್ಲಿ ಅಮಿರ್ ಖಾನ್ ಜೊತೆಗಿನ ಫೋಟೋ ಶೇರ್ ಮಾಡಿದ್ದಾರೆ.