ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸದ್ಯ ರಷ್ಯಾದಲ್ಲಿ ತಮ್ಮ ಮುಂಬರುವ 'ಟೈಗರ್ 3' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ಈ ಚಿತ್ರದಲ್ಲಿನ ಸಲ್ಮಾನ್ ಖಾನ್ ಲುಕ್ ಮಾತ್ರ ಸೋಷಿಯಲ್ ಮೀಡಿಯಾಗಳಲ್ಲಿ ಲೀಕ್ ಆಗಿದೆ.
'salmanic_aryan' ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ 'ಟೈಗರ್ 3' ಸಿನಿಮಾ ಶೂಟಿಂಗ್ ವೇಳೆಯಲ್ಲಿ ಕ್ಲಿಕ್ಕಿಸಲಾದ ಫೋಟೋವೊಂದನ್ನು ಶೇರ್ ಮಾಡಲಾಗಿದೆ. ಈ ಫೋಟೋದಲ್ಲಿ ನಟ ಸಲ್ಮಾನ್ ಖಾನ್ ಜೀನ್ಸ್, ಬಿಳಿ ಟೀ ಶರ್ಟ್ ಮೇಲೆ ಕೆಂಪು ಜಾಕೆಟ್ ಹಾಗೂ ಕೆಂಪು ಬಣ್ಣದ ಹೆಡ್ ಬ್ಯಾಂಡ್ ಧರಿಸಿರುವುದು, ಕಂದು ಬಣ್ಣದ ಉದ್ದನೆಯ ಗಡ್ಡ ಬಿಟ್ಟಿರುವುದು ಕಂಡು ಬಂದಿದೆ. ತಮ್ಮ ನೆಚ್ಚಿನ ನಟನ ಹೊಸ ಗೆಟ್‌ಅಪ್ ಕಂಡ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.