ಕರ್ನಾಟಕ

karnataka

ETV Bharat / sitara

"ಘೋರ ಚಂಡ ಮಾರುತದ ನಂತರ ಸುಂದರ ಸಂಗತಿ ಸಂಭವಿಸಬಹುದು": ಪತಿಗೆ ಜಾಮೀನು ಸಿಕ್ಕ ಖುಷಿಯಲ್ಲಿ ನಟಿ ಶಿಲ್ಪಾ ಶೆಟ್ಟಿ - Shilpa's post after Raj Kundra gets bail news

ಘೋರ ಚಂಡ ಮಾರುತದ ನಂತರ ಸುಂದರ ಸಂಗತಿಗಳು ಸಂಭವಿಸಬಹುದು" ಎಂದು ನಟಿ ಶಿಲ್ಪಾ ಶೆಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. "ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ ಬಳಿಕ ನಾವು ಜಾಮೀನಿಗಾಗಿ ಅರ್ಜಿ ಸಲ್ಲಿಸಿದೆವು..

Raj Kundra gets bail
ಪತಿಗೆ ಜಾಮೀನು ಸಿಕ್ಕ ಖುಷಿಯಲ್ಲಿ ನಟಿ ಶಿಲ್ಪಾ ಶೆಟ್ಟಿ

By

Published : Sep 21, 2021, 9:34 PM IST

Updated : Sep 21, 2021, 10:09 PM IST

ಪತಿ ರಾಜ್ ಕುಂದ್ರಾ ಬಂಧನವಾದ ಬಳಿಕ ನಟಿ ಶಿಲ್ಪಾ ಶೆಟ್ಟಿ ಸಾರ್ವಜನಿಕವಾಗಿ ತೀವ್ರ ಮುಜುಗರ ಅನುಭವಿಸಿದ್ದರು. ಕೆಲ ವರದಿಗಳಿಂದ ಬೇಸತ್ತ ಶಿಲ್ಪಾ ಶೆಟ್ಟಿ ಕೋರ್ಟ್ ಮೆಟ್ಟಿಲೇರಿದ್ದರು. ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​ಕುಂದ್ರಾ ನಿನ್ನೆ ಜೈಲಿನಿಂದ ರಿಲೀಸ್ ಆಗಿದ್ದಾರೆ. ಇದೀಗ ಪತಿ ರಾಜ್ ಕುಂದ್ರಾ ಅವರಿಗೆ ಜಾಮೀನು ಸಿಕ್ಕಿದ್ದು, ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

"ಘೋರ ಚಂಡ ಮಾರುತದ ನಂತರ ಸುಂದರ ಸಂಗತಿಗಳು ಸಂಭವಿಸಬಹುದು" ಎಂದು ನಟಿ ಶಿಲ್ಪಾ ಶೆಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. "ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ ಬಳಿಕ ನಾವು ಜಾಮೀನಿಗಾಗಿ ಅರ್ಜಿ ಸಲ್ಲಿಸಿದೆವು.

ಅದನ್ನು ನ್ಯಾಯಾಲಯ ಮಂಜೂರು ಮಾಡಿದೆ. ನಮ್ಮನ್ನು ನೆಲಕ್ಕೆ ತಳ್ಳುವ ಕ್ಷಣಗಳು ಆಗಾಗ ಎದುರಾಗುತ್ತಲೇ ಇರುತ್ತವೆ. ಏಳು ಬಾರಿ ನೀವು ಕೆಳಗೆ ಬಿದ್ದರೂ, ಎಂಟನೇ ಬಾರಿ ಎದ್ದು ನಿಲ್ಲುವ ತಾಕತ್ತನ್ನು ನೀವು ಬೆಳೆಸಿಕೊಳ್ಳಬೇಕು ಎಂಬುದನ್ನು ನಾನು ಬಲವಾಗಿ ನಂಬಿದ್ದೇನೆ" ಎಂದರು.

"ಈ ಕಷ್ಟದ ಸಮಯದಲ್ಲಿ ಧೈರ್ಯ, ಇಚ್ಛಾಶಕ್ತಿ ಬೇಕೇಬೇಕು. ಈ ಗುಣಗಳೇ ಜೀವನವೆಂಬ ಪಯಣದಲ್ಲಿ ನಿಮ್ಮನ್ನು ಹೆಚ್ಚು ದೃಢವಾಗಿಸುವವು. ಪ್ರತಿ ಬಾರಿ ಮೇಲಕ್ಕೆ ಏರಿದಾಗಲೂ ಅಸಾಧ್ಯವಾದದ್ದನ್ನು ಸಾಧ್ಯವಾಗಿಸಲು ನೀವು ಹೊಸ ನಿರ್ಧಾರ ಮತ್ತು ಪ್ರೇರಣೆಯೊಂದಿಗೆ ಹಿಂತಿರುಗುತ್ತೀರಿ" ಎಂದು ಶಿಲ್ಪಾ ಶೆಟ್ಟಿ ಬರೆದುಕೊಂಡಿದ್ದಾರೆ.

ಓದಿ:ಅಶ್ಲೀಲ ವಿಡಿಯೋ ಚಿತ್ರೀಕರಣ ಕೇಸ್: ಜೈಲಿನಿಂದ ಉದ್ಯಮಿ ರಾಜ್​ಕುಂದ್ರಾ ರಿಲೀಸ್

Last Updated : Sep 21, 2021, 10:09 PM IST

ABOUT THE AUTHOR

...view details