ಕರ್ನಾಟಕ

karnataka

ETV Bharat / sitara

ಮತ್ಸ್ಯಕನ್ಯೆ ಲುಕ್​​ನಲ್ಲಿ ಕಾಣಿಸಿಕೊಂಡ ಜಾಹ್ನವಿ ಕಪೂರ್

ಪತ್ರಿಕೆಯೊಂದರ ಮುಖಪುಟಕ್ಕಾಗಿ ಪೋಸ್​ ನೀಡಿರುವ ನಟಿ ಜಾಹ್ನವಿ ಕಪೂರ್ ಅವರ ಆಕರ್ಷಕ ಫೋಟೋಗಳು ಸದ್ದು ಮಾಡುತ್ತಿವೆ.

This person is Janhvi Kapoor's 'favourite for life'. See his picture inside
ನಟಿ ಜಾಹ್ನವಿ ಕಪೂರ್

By

Published : Nov 9, 2021, 4:47 PM IST

ಹೈದರಾಬಾದ್ (ತೆಲಂಗಾಣ):ವಿನ್ಯಾಸಭರಿತ ದಿರಿಸುಗಳ ಮೂಲಕ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಗಮನ ಸೆಳೆದಿದ್ದಾರೆ. ಅವರ ಆಕರ್ಷಕ ಪೋಟೋಗಳು ನೆಟ್ಟಿಗರ ಗಮನ ಸೆಳೆಯುತ್ತಿವೆ.

ಮತ್ಸ್ಯ ಕನ್ಯೆಯ ಲುಕ್​​ನಲ್ಲಿ ಕಾಣಿಸಿಕೊಂಡಿರುವ ಅವರ ಫೋಟೋ ಇದೀಗ ಪತ್ರಿಕೆಯೊಂದರ ಮುಖಪುಟದಲ್ಲಿ ರಾರಾಜಿಸುತ್ತಿದೆ.


ನಟಿಯು ಇತ್ತೀಚೆಗೆ ವಿನ್ಯಾಸಭರಿತ ಬಟ್ಟೆ ತೊಟ್ಟು ಫೋಟೋ ಶೂಟ್​ ಮಾಡಿಸಿಕೊಂಡಿದ್ದು ಅವುಗಳನ್ನು ನಿನ್ನೆ (ಸೋಮವಾರ) ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಥೇಟ್​ ಮತ್ಸ್ಯ ರೂಪದಲ್ಲಿ ಕಾಣಿಸಿಕೊಂಡಿರುವ ಜಾಹ್ನವಿಯ ಮಾದಕ ನೋಟಕ್ಕೆ ನೆಟಿಜನ್ಸ್​​​ ಫಿದಾ ಆಗಿದ್ದಾರೆ.

ಫ್ಯಾಶನ್ ಮ್ಯಾಗಜೀನ್‌ ಹಲೋ ಎಂಬ ನಿಯತಕಾಲಿಕೆಗಾಗಿ ಜಾಹ್ನವಿ ಕ್ಯಾಮರಾಗೆ ಫೋಸ್​ ನೀಡಿದ್ದು ಫೋಟೋವನ್ನು ಪತ್ರಿಕೆ ಮುಖಪುಟದಲ್ಲಿ ಅಚ್ಚು ಮಾಡಿಕೊಂಡಿದೆ.

ವಸ್ತ್ರವಿನ್ಯಾಸಕ ಮನೀಷ್​ ಮಲ್ಹೋತ್ರಾ ವಿನ್ಯಾಸ ಮಾಡಿರುವ ದಿರಿಸುಗಳು ಇವುಗಳಾಗಿದ್ದು ಜಾಹ್ನವಿ ತಮ್ಮ ಇನ್ಸ್​ಟಾಗ್ರಾಮ್​ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೇ, ನನ್ನ ಜೀವನಕ್ಕೆ ಅಚ್ಚುಮೆಚ್ಚು ಎಂದು ಕ್ಯಾಪ್ಶನ್​ ಹಾಕಿದ್ದಾರೆ.

ಮನೀಶ್ ಮಲ್ಹೋತ್ರಾ ಬಾಲಿವುಡ್‌ನ ಅತ್ಯಂತ ಬೇಡಿಕೆಯ ವಸ್ತ್ರ ವಿನ್ಯಾಸಕರಲ್ಲೊಬ್ಬರು. ಜಾಹ್ನವಿ ಕಪೂರ್​ ತಂದೆ ಬೋನಿ ಕಪೂರ್ ಹಾಗೂ ತಾಯಿ ಶ್ರೀದೇವಿ ಅವರ ಕಾಲದಿಂದಲೂ ಮನೀಶ್ ಅವರು ಕಪೂರ್​ ಕುಟುಂಬದೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದಾರೆ.


ABOUT THE AUTHOR

...view details