ಕರ್ನಾಟಕ

karnataka

ETV Bharat / sitara

ಉರಿ ಚಿತ್ರದ 'How's The Josh' ಡೈಲಾಗಿಗೂ..ಈ ಹುಡುಗನಿಗೂ ಇದೆ ಲಿಂಕ್​ ! - ಉರಿ

ಈ ಚಿತ್ರದಲ್ಲಿರುವುದು ಬಾಲಿವುಡ್ ನಟ ವಿಕ್ಕಿ ಕೌಶಾಲ್​. ಇತ್ತೀಚಿಗಷ್ಟೇ ಇವರು ನಟಿಸಿರುವ ಉರಿ ಚಿತ್ರ ಸೂಪರ್ ಹಿಟ್ ಆಗಿತ್ತು. ​

ಚಿತ್ರಕೃಪೆ : ಇನ್​ಸ್ಟಾಗ್ರಾಂ

By

Published : Apr 22, 2019, 1:47 PM IST

ಎಲ್ಲೋ ಕಳೆದು ಹೋದ ಫೋಟೋಗಳು ಬಹುದಿನಗಳ ನಂತರ ಕಣ್ಣಿಗೆ ಬಿದ್ದಾಗ ಆಗುವ ಆನಂದಕ್ಕೆ ಪಾರವೇ ಇರೋದಿಲ್ಲ. ಅದರಲ್ಲೂ ಕೈಗೆ ಸಿಕ್ಕ ಬಾಲ್ಯದ ಬ್ಲ್ಯಾಕ್ ಅಂಡ್ ವೈಟ್ ಪಟಗಳು ನಮ್ಮ ಚೈಲ್ಡ್​ವುಡ್​ ಲೈಫ್​ಗೆ ಮರಳಿ ಕರೆದೊಯ್ಯುತ್ತವೆ.

ಹೀಗೆ ಸಾಕಷ್ಟು ಸೆಲೆಬ್ರಿಟಿಗಳು ತಮ್ಮ ಚೈಲ್ಡ್​​ವುಡ್​ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡು ಸಂಭ್ರಮ ಪಡುತ್ತಾರೆ. ಎಲ್ಲೋ ಹುದುಗಿ ಹೋಗಿದ್ದ ನೆನಪುಗಳನ್ನು ಇಂತಹ ಫೋಟೋಗಳೊಂದಿಗೆ ಎಲ್ಲರೊಂದಿಗೆ ಹಂಚಿಕೊಳ್ಳುತ್ತಾರೆ. ಇದೀಗ ಬಾಲಿವುಡ್​ ನಟ ತಮ್ಮ ಚಿಕ್ಕ ವಯಸ್ಸಿನ ಪಟ ಸೋಷಿಯಲ್ ಅಕೌಂಟ್​​ಗಳಲ್ಲಿ ಶೇರ್ ಮಾಡಿದ್ದಾರೆ. ಕೇವಲ ಒಂದೇ ದಿನದಲ್ಲಿ ಈ ಚಿತ್ರ 9 ಲಕ್ಷಕ್ಕೂ ಹೆಚ್ಚು ಮೆಚ್ಚುಗೆ ಹಾಗೂ ಕಾಮೆಂಟ್​ಗಳನ್ನು ಪಡೆದುಕೊಂಡಿದೆ. ಚಿತ್ರದಲ್ಲಿರುವ ಪುಟ್ಟ ಬಾಲಕ ಇಂದು ಬಾಲಿವುಡ್​ ಬಹುಬೇಡಿಕೆ ನಟ.

ದೇಶ್ಯಾದ್ಯಂತ ಸದ್ದು ಮಾಡಿದ್ದ 'ಉರಿ' ಚಿತ್ರ ನೀವು ನೋಡಿರಬಹುದು. ಪಾಕ್​ ನೆಲಕ್ಕೆ ನುಗ್ಗಿ ಉಗ್ರರ ದಮನ ಮಾಡಿ, ಸೈನಿಕರೆ 'How's The Josh'? ಎನ್ನುವ ಡೈಲಾಗ್​ ಕೂಡ ನೀವು ಕೇಳಿರಬಹುದು. ಈ ಡೈಲಾಗ್ ಸಖತ್​ ಫೇಮಸ್ ಆಗಿತ್ತು. ಈ ಉದ್ಘೋಷ ಹೊರಡಿಸಿದ್ದು ನಟ ವಿಕ್ಕಿ ಕೌಶಾಲ್​ ಎನ್ನುವುದು ಎಲ್ಲರಿಗೂ ಗೊತ್ತು. ಸದ್ಯ ಈ ಚಿತ್ರದಲ್ಲಿರುವ ಬಾಲಕನೇ ವಿಕ್ಕಿ.

ಶನಿವಾರ ವಿಕ್ಕಿ ತಮ್ಮ ಥ್ರೋಬ್ಯಾಕ್ ಚಿತ್ರವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಬಾಲಿವುಡ್ ಸೆಲೆಬ್ರಿಟಿಗಳಿಂದ ಮೆಚ್ಚುಗೆಯ ಸುರಿಮಳೆಯಾಗಿದೆ.

ABOUT THE AUTHOR

...view details