ಚೆನ್ನೈ (ತಮಿಳುನಾಡು) : ಚೆನ್ನೈ ಮೂಲದ ವೈದ್ಯೆಯಾಗಿದ್ದ ಡಾ.ಲಕ್ಷ್ಮಿದೇವಿ ಹಾಲಿವುಡ್ನಲ್ಲಿ ನಟನೆ ಮತ್ತು ಚಲನಚಿತ್ರ ನಿರ್ದೇಶನದಲ್ಲಿ ಆಸಕ್ತಿ ತಳೆದಿದ್ದರು. ಇದೀಗ ಇವರ ನಿರ್ದೇಶನದ ‘ವೆನ್ ದಿ ಮ್ಯೂಸಿಕ್ ಚೇಂಜಸ್’ ಚಿತ್ರಕ್ಕೆ ಬೆಸ್ಟ್ ಡೈರೆಕ್ಟರ್ ಅವಾರ್ಡ್ ಲಭಿಸಿದೆ. 54ನೇ ವಿಶ್ವ ಹೂಸ್ಟನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರತಿಷ್ಠಿತ ಗೋಲ್ಡ್ ರೆಮಿ ಪ್ರಶಸ್ತಿ ಪಡೆದಿದ್ದಾರೆ.
ಚೆನ್ನೈ ಮೂಲದ ನಟಿ-ನಿರ್ದೇಶಕಿಯ ‘ವೆನ್ ದಿ ಮ್ಯೂಸಿಕ್ ಚೇಂಜಸ್’ ಚಿತ್ರಕ್ಕೆ ಪ್ರತಿಷ್ಠಿತ ಗೋಲ್ಡ್ ರೆಮಿ ಪ್ರಶಸ್ತಿ - ಬೆಸ್ಟ್ ಡೈರೆಕ್ಟರ್ ಅವಾರ್ಡ್
ಪ್ರಶಸ್ತಿ ದೊರೆತಿರುವ ಕುರಿತು ಸಂತಸ ವ್ಯಕ್ತಪಡಿಸಿರುವ ಲಕ್ಷ್ಮಿದೇವಿ, ಭಾರತ ಮೂಲದ ನನ್ನಂತಹ ಚಲನಚಿತ್ರ ನಿರ್ದೇಶಕರಿಗೆ ಸಂದಿರುವ ದೊಡ್ಡ ಗೌರವ ಇದಾಗಿದೆ ಎಂದಿದ್ದಾರೆ. ಲಕ್ಷ್ಮಿದೇವಿ ಯುಎಸ್ನಲ್ಲಿ ನೆಲೆಸಿದ್ದರೂ ಕೂಡ ಚೆನ್ನೈನಲ್ಲಿ ಹೆಚ್ಚಾಗಿ ಕಳೆಯುತ್ತಿದ್ದರು..
![ಚೆನ್ನೈ ಮೂಲದ ನಟಿ-ನಿರ್ದೇಶಕಿಯ ‘ವೆನ್ ದಿ ಮ್ಯೂಸಿಕ್ ಚೇಂಜಸ್’ ಚಿತ್ರಕ್ಕೆ ಪ್ರತಿಷ್ಠಿತ ಗೋಲ್ಡ್ ರೆಮಿ ಪ್ರಶಸ್ತಿ this-doctor-turned-filmmaker-is-winning-laurels-in-us](https://etvbharatimages.akamaized.net/etvbharat/prod-images/768-512-11694628-924-11694628-1620543802100.jpg)
ಪ್ರಶಸ್ತಿ ದೊರೆತಿರುವ ಕುರಿತು ಸಂತಸ ವ್ಯಕ್ತಪಡಿಸಿರುವ ಲಕ್ಷ್ಮಿದೇವಿ, ಭಾರತ ಮೂಲದ ನನ್ನಂತಹ ಚಲನಚಿತ್ರ ನಿರ್ದೇಶಕರಿಗೆ ಸಂದಿರುವ ದೊಡ್ಡ ಗೌರವ ಇದಾಗಿದೆ ಎಂದಿದ್ದಾರೆ. ಲಕ್ಷ್ಮಿದೇವಿ ಯುಎಸ್ನಲ್ಲಿ ನೆಲೆಸಿದ್ದರೂ ಕೂಡ ಚೆನ್ನೈನಲ್ಲಿ ಹೆಚ್ಚಾಗಿ ಕಳೆಯುತ್ತಿದ್ದರು. ಆದರೆ, ಕೊರೊನಾ ಕಾರಣದಿಂದಾಗಿ ಈಗ ಭಾರತದಲ್ಲಿಯೇ ನೆಲೆಸಿದ್ದಾರೆ.
ನ್ಯೂಯಾರ್ಕ್ನಲ್ಲಿ ಪ್ರೊಡಕ್ಷನ್ ಹೌಸ್ ಹೊಂದಿರುವ ದೇವಿ ಈ ಚಿತ್ರದಲ್ಲಿ ನಾಯಕಿಯಾಗಿಯೂ ನಟಿಸಿದ್ದರು. ಚಿತ್ರಕ್ಕೆ ಹಾಲಿವುಡ್‌ನ ನಟ, ನಿರ್ದೇಶಕ ಜಾನ್ ಟುರ್ಟುರೋ ಕಾರ್ಯಕಾರಿ ನಿರ್ಮಾಪಕರಾಗಿದ್ದರು. ವೆನ್ ದಿ ಮ್ಯೂಸಿಕ್ ಚೇಂಜಸ್ ಚಿತ್ರವು ಭಾರತದಲ್ಲಿ ನಡೆಯುತ್ತಿರುವ ಅತ್ಯಾಚಾರದಂತಹ ಕೃತ್ಯದ ಸುತ್ತ ನಡೆಯುವ ಕಥೆಯಾಗಿತ್ತು.