ಮುಂಬೈ:ನಟಿ ಕಂಗನಾ ರನೌತ್ ಇಂದು ಮುಂಜಾನೆ ಮನಾಲಿಯಲ್ಲಿರುವ ತಮ್ಮ ಮನೆಗೆ ತೆರಳಿದ ನಂತರ ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಹಾರಾಷ್ಟ್ರ ಸರ್ಕಾರ ನನ್ನನ್ನು ದುರ್ಬಲ ಎಂದು ಪರಿಗಣಿಸಿ ತಪ್ಪು ಮಾಡುತ್ತಿದೆ: ಕಂಗನಾ - ಶಿವಸೇನೆ
ನನ್ನನ್ನು ದುರ್ಬಲ ಮಹಿಳೆ ಎಂದು ಪರಿಗಣಿಸುವ ಮೂಲ ಅವರು ತಪ್ಪು ಮಾಡುತ್ತಿದ್ದಾರೆ ಎಂದು ಕಂಗನಾ ರನೌತ್ ಟ್ವೀಟ್ ಮಾಡಿದ್ದಾರೆ.
"ತಮ್ಮನ್ನು ಸಂರಕ್ಷಕರು ಎಂದು ಹೇಳಿಕೊಳ್ಳುವ ಅವರು ನನ್ನನ್ನು ದುರ್ಬಲ ಮಹಿಳೆ ಎಂದು ಪರಿಗಣಿಸುವ ಮೂಲಕ ತಪ್ಪು ಮಾಡುತ್ತಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.
"ಜಬ್ ರಕ್ಷಕ್ ಹೀ ಬಕ್ಷಕ್ ಹೋನೆ ಕಾ ಐಲಾನ್ ಕರ್ ರಹೇ ಹೈ, ಘಡಿಯಾಲ್ ಬನ್ ಲೋಕ್ತಂತ್ರ ಕಾ ಚೀರ್ಹರನ್ ಕರ್ ರಹೇ ಹೈ, ಮುಜೆ ಕಮ್ಜೋರ್ ಸಮಜ ಕಾರ್ ಬಹುತ್ ಬಡಿ ಭೂಲ್ ಕರ್ ರಹೇ ಹೈ! ಏಕ್ ಮಹಿಲಾ ಕೋ ಡರಾ ಕರ್ ಉಸೆ ನಿಚಾ ದಿಖಾಕರ್, ಅಪ್ನಿ ಇಮೇಜ್ ಕೊ ಧೂಲ್ ಕರ್ ರಹೇ ಹೈ (ರಕ್ಷಕರೇ ಭಕ್ಷಕರಾಗುತ್ತಿದ್ದಾರೆ, ಪ್ರಜಾಪ್ರಭುತ್ವಕ್ಕೆ ಹಾನಿಗೊಳಿಸುತ್ತಿದ್ದಾರೆ, ನನ್ನನ್ನು ದುರ್ಬಲಳೆಂದು ಪರಿಗಣಿಸುವ ಮೂಲಕ ದೊಡ್ಡ ತಪ್ಪು ಮಾಡುತ್ತಿದ್ದಾರೆ! ಓರ್ವ ಮಹಿಳೆಗೆ ಬೆದರಿಕೆ ಹಾಕುವ ಮೂಲಕ ಅವರು ತಮ್ಮ ಮೌಲ್ಯವನ್ನೇ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ)" ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.