ಕರ್ನಾಟಕ

karnataka

ETV Bharat / sitara

'ಮಹಿಳೆಗೆ ಅಸಾಧ್ಯವಾದದ್ದು ಏನೂ ಇಲ್ಲ': 2ನೇ ಮಗುವಿನ ಮೊದಲ ಫೋಟೋ ಶೇರ್​ ಮಾಡಿದ ಬೆಬೊ - Kareena Kapoor Khan Instagram

ಬಾಲಿವುಡ್​ ನಟಿ ಕರೀನಾ ಕಪೂರ್ ಖಾನ್ ತಮ್ಮ ಎರಡನೇ ಗಂಡು ಮಗುವಿನ ಫೋಟೋವನ್ನು ಮೊದಲ ಬಾರಿ ಹಂಚಿಕೊಂಡಿದ್ದಾರೆ.

Kareena shares first picture with newborn
2ನೇ ಮಗುವಿನ ಮೊದಲ ಫೋಟೋ ಶೇರ್​ ಮಾಡಿದ ಬೆಬೊ

By

Published : Mar 8, 2021, 2:58 PM IST

ಹೈದರಾಬಾದ್:ಅಂತಾರಾಷ್ಟ್ರೀಯ ಮಹಿಳಾ ದಿನದಂದು ಬಾಲಿವುಡ್​ ನಟಿ ಕರೀನಾ ಕಪೂರ್ ಖಾನ್ ತಮ್ಮ ಎರಡನೇ ಗಂಡು ಮಗುವಿನ ಫೋಟೋವನ್ನು ಮೊದಲ ಬಾರಿ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

"ಮಹಿಳೆಯರಿಂದ ಮಾಡಲಾಗದ ಕೆಲಸಗಳೇನೂ ಇಲ್ಲ. ನನ್ನ ಪ್ರೀತಿಯ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು" ಎಂಬ ಶೀರ್ಷಿಕೆ ನೀಡಿ ಮಗುವನ್ನು ಮಲಗಿಸಿಕೊಂಡಿರುವ ಫೋಟೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಮಹಿಳಾ ಪ್ರಧಾನ ಚಿತ್ರಗಳಿಗೆ ಮನ್ನಣೆ: ಮಹಿಳಾ ದಿನಕ್ಕೆ ವಿಶೇಷ ಕೊಡುಗೆ ನೀಡಲು ಮುಂದಾದ ಬಾಲಿವುಡ್​

ಫೆಬ್ರವರಿ 21 ರಂದು ಮುಂಬೈನ ಬ್ರಿಡ್ಜ್​ ಕ್ಯಾಂಡಿ ಆಸ್ಪತ್ರೆಯಲ್ಲಿ ಕರೀನಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ನಟ ಸೈಫ್ ಅಲಿ ಖಾನ್​ ಹಾಗೂ ಕರೀನಾ ದಂಪತಿಗೆ ನಾಲ್ಕು ವರ್ಷದ ಮಗ ತೈಮೂರ್ ಕೂಡ ಇದ್ದಾನೆ.

ABOUT THE AUTHOR

...view details