ಕರ್ನಾಟಕ

karnataka

ETV Bharat / sitara

135 ಕೋಟಿ ಭಾರತೀಯರ ಪ್ರೀತಿಯೇ ನನಗೆ ಬಹು ದೊಡ್ಡ ಅವಾರ್ಡ್​: ಸೋನು ಹೀಗೆ ಹೇಳಿದ್ದೇಕೆ.! - ಬಾಲಿವುಡ್ ನಟ ಸೋನು ಸೂದ್

ತಾವು ಪಡೆದ ದೊಡ್ಡ ಪ್ರಶಸ್ತಿ ಎಂದರೆ ಅದು ಜನರು ತೋರಿಸಿದ ಪ್ರೀತಿ ಎಂದು ಬಾಲಿವುಡ್ ನಟ ಸೋನು ಸೂದ್ ಟ್ವೀಟ್ ಮಾಡಿದ್ದಾರೆ. ಇದಲ್ಲದೇ ಐಎಎಸ್​ ಕನಸು ಕಂಡ ಬಡವರಿಗೆ ನೆರವು ನೀಡಲು ಸೋನು ಸೂದ್ ಮುಂದಾಗಿದ್ದಾರೆ.

The love of 135 crore Indians is my biggest award
135 ಕೋಟಿ ಭಾರತೀಯರ ಪ್ರೀತಿಯೇ ಬಹು ದೊಡ್ಡ ಅವಾರ್ಡ್

By

Published : Jun 12, 2021, 5:15 PM IST

ಬಾಲಿವುಡ್ ನಟ ಸೋನು ಸೂದ್, ತಾವು ಪಡೆದ ದೊಡ್ಡ ಪ್ರಶಸ್ತಿ ಎಂದರೆ ಅದು ಜನರು ತೋರಿಸಿದ ಪ್ರೀತಿ ಎಂದು ಹೇಳಿದ್ದಾರೆ. ಈ ವರ್ಷದ ಪದ್ಮವಿಭೂಷಣ ಪ್ರಶಸ್ತಿಯನ್ನು ಸೋನು ಸೂದ್ ಅವರಿಗೆ ನೀಡಬೇಕು ಎಂದು ಟಾಲಿವುಡ್ ನಟ ಬ್ರಹ್ಮಜಿ ಟ್ವೀಟ್ ಮಾಡಿದ್ದಾರೆ. ಕೊರೊನಾ ಸಮಯದಲ್ಲಿ ಸೋನು ಸೇವೆಗಳನ್ನು ಗುರುತಿಸಿ, ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನಟ ಬ್ರಹ್ಮಜಿಯವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಸೋನು, "135 ಕೋಟಿ ಭಾರತೀಯರ ಪ್ರೀತಿಯನ್ನು ಗೆಲ್ಲುವುದೇ ದೊಡ್ಡ ಪ್ರಶಸ್ತಿ. ನಾನು ಈಗಾಗಲೇ ಆ ಪ್ರಶಸ್ತಿಯನ್ನು ಗೆದ್ದಿದ್ದೇನೆ" ಎಂದು ಉತ್ತರಿಸಿದ್ದಾರೆ.

ಐಎಎಸ್​ ಕನಸು ಕಂಡ ಬಡವರಿಗೆ ಸೋನು ಸೂದ್ ನೆರವು:

‘ಸೂದ್​ ಚಾರಿಟಿ ಫೌಂಡೇಶನ್​’ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡಲು ಸೋನು ಸೂದ್ ಮುಂದಾಗಿದ್ದಾರೆ. ಐಎಎಸ್​ ಪರೀಕ್ಷೆ ಬರೆಯಬೇಕು ಎಂಬ ಕನಸು ಇಟ್ಟುಕೊಂಡ ಬಡ ವಿದ್ಯಾರ್ಥಿಗಳಿಗೆ ಕೋಚಿಂಗ್​ ಪಡೆಯಲು ಸಹಾಯ ಮಾಡಲು ಸೋನು ಸೂದ್​ ನಿರ್ಧರಿಸಿದ್ದಾರೆ.

ಈ ಕುರಿತು ತಮ್ಮ ಟ್ವಿಟರ್​ ಖಾತೆಯಲ್ಲಿ, "ಮಾಡಬೇಕಿದೆಯೇ ಐಎಎಸ್​ ತಯಾರಿ? ನಾವು ಹೊತ್ತುಕೊಳ್ಳುತ್ತೇವೆ ನಿಮ್ಮ ಜವಾಬ್ದಾರಿ" ಎಂದು ಪೋಸ್ಟ್​ ಮಾಡಿದ್ದಾರೆ. ಈ ಸೌಲಭ್ಯ ಪಡೆಯಲು ಜೂ.30ರ ವರೆಗೆ ಮಾತ್ರ ಅವಕಾಶ ಇದೆ. ಸೂದ್​ ಅವರಿಂದ ಸಹಾಯ ಅಪೇಕ್ಷಿಸುವವರು ತಮ್ಮ ಹೆಸರನ್ನು www.soodcharityfoundation.org ವೆಬ್​ಸೈಟ್​ನಲ್ಲಿ ನೋಂದಣಿ ಮಾಡಿಕೊಳ್ಳಬೇಕು.

ABOUT THE AUTHOR

...view details