ಮುಂಬೈ: ಬಾಲಿವುಡ್ ನಟ ಇರ್ಫಾನ್ ಖಾನ್ ಅವರ ನಿಧನದ ಸುಮಾರು ಎರಡು ತಿಂಗಳ ಬಳಿಕ, ಅವರ ಪತ್ನಿ ಸುತಾಪಾ ಸಿಕ್ದಾರ್ ಅವರು ಭಾನುವಾರ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅರಳುತ್ತಿರುವ ಕಮಲಗಳ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಖಾನ್ ಆ ಹೂವುಗಳನ್ನು ಹೇಗೆ ಪೋಷಿಸುತ್ತಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ.
ಸುತಾಪಾ ಅವರು ಹೂ ಬಿಡುವ ಕಮಲಗಳ ಚಿತ್ರವನ್ನು ಇನ್ಸ್ಟಾಗ್ರಾಮ್ ಹಂಚಿಕೊಂಡಿದ್ದು, ಇರ್ಫಾನ್ ಖಾನ್ ಅವುಗಳನ್ನು ಬಾಟಲಿಗಳಲ್ಲಿ ತಂದು ಯಾವ ರೀತಿ ಕೆಸರಿಗೆ ಹಾಕಿ ಬೆಳಸುತ್ತಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ.