ಮುಂಬೈ :ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಿದ ಆರೋಪದಲ್ಲಿ ಜೈಲು ಸೇರಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ಗೆ ಇಂದೂ ಕೂಡ ಜಾಮೀನು ಸಿಗಲಿಲ್ಲ. ಬಾಂಬೆ ಹೈಕೋರ್ಟ್‌ನಲ್ಲಿಂದು ನಡೆದ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಧೀಶರು ನಾಳೆಗೆ ಮುಂದೂಡಿದ್ದಾರೆ.
ವಕೀಲ ಅಲಿ ಕಾಶಿಫ್ ಖಾನ್ ದೇಶಮುಖ್ ಮತ್ತು ಹಿರಿಯ ವಕೀಲ ಅಮಿತ್ ದೇಸಾಯಿ ಇಂದು ತಮ್ಮ ವಾದವನ್ನು ಮುಕ್ತಾಯಗೊಳಿಸಿದ ನಂತರ ನ್ಯಾಯಾಧೀಶರಾದ ನಿತಿನ್ ಡಬ್ಲ್ಯೂ ಸಾಂಬ್ರೆ ಅವರ ಏಕಸದಸ್ಯ ಪೀಠ ವಿಚಾರಣೆಯನ್ನು ನಾಳೆ ಮುಂದೂಡುವ ನಿರ್ಧಾರಕ್ಕೆ ಬಂದಿದೆ. ನಾಳೆ ಎನ್‌ಸಿಬಿ ಪರ ವಾದವನ್ನು ಕೋರ್ಟ್ ಆಲಿಸಲಿದೆ.
ಅರ್ಬಾಜ್ ಪರ ವಾದ ಮಂಡಿಸಿದ ದೇಸಾಯಿ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಆರೋಪಿಸಿದಂತೆ ಪಿತೂರಿಗೆ ಯಾವುದೇ ಆಧಾರಗಳಿಲ್ಲ ಎಂದು ಹೇಳಿದ್ದಾರೆ. ಆರ್ಯನ್ ಪ್ರಕರಣದಲ್ಲಿ ಮಾಡಿದ ವಾದಗಳನ್ನು ಇಂದು ಅವರು ಪುನರುಚ್ಚರಿಸಿದ್ದಾರೆ.