ಬಾಲಿವುಡ್ ನಟಿ ಕಂಗನಾ ರಣಾವತ್ ಇಂದು 34ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕಂಗನಾ ಜನ್ಮದಿನದ ವಿಶೇಷವಾಗಿ ಇಂದು 'ತಲೈವಿ' ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಈ ಚಿತ್ರದಲ್ಲಿ ಕಂಗನಾ ತಮಿಳುನಾಡು ಮಾಜಿ ಮುಖ್ಯಮಂತ್ರಿ, ದಿವಂಗತ ಜಯಲಲಿತಾ ಅವರ ಪಾತ್ರದಲ್ಲಿ ನಟಿಸಿದ್ದಾರೆ.
ನಿರ್ದೇಶಕ ವಿಜಯ್ಗೆ ಧನ್ಯವಾದ ಅರ್ಪಿಸಿದ ಕಂಗನಾ ರಣಾವತ್ - Thalaivi trailer released
ಇಂದು ಚೆನ್ನೈನಲ್ಲಿ 'ತಲೈವಿ' ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಮಾತನಾಡಿದ ಕಂಗನಾ, ನಿರ್ದೇಶಕ ಹಾಗೂ ಸಹನಟ ಅರವಿಂದ್ ಸ್ವಾಮಿ ಅವರನ್ನು ಕಂಗನಾ ರಣಾವತ್ ಹೊಗಳಿದರು. ಸಮಾರಂಭದಲ್ಲಿ ಕಂಗನಾ ಚಿತ್ರದ ಬಗ್ಗೆ ಮಾತನಾಡುತ್ತಾ ಭಾವುಕರಾದರು.
ಇದನ್ನೂ ಓದಿ:ಪತ್ನಿ ಯೋಗದಲ್ಲಿ, ಪತಿ ಡ್ಯಾನ್ಸ್ನಲ್ಲಿ ಬ್ಯುಸಿ: ಶಿಲ್ಪಾ ಶೆಟ್ಟಿ - ರಾಜ್ ಕುಂದ್ರಾ ಬಿಂದಾಸ್ ವಿಡಿಯೋ
'ತಲೈವಿ' ಟ್ರೇಲರ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಂದು ಚೆನ್ನೈನಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು. ಈ ವೇಳೆ ಮಾತನಾಡಿದ ಕಂಗನಾ ರಣಾವತ್, ಚಿತ್ರದ ನಿರ್ದೇಶಕ ಎ.ಎಲ್. ವಿಜಯ್ ಹಾಗೂ ಸಹ ನಟ ಅರವಿಂದ್ ಸ್ವಾಮಿ ಅವರನ್ನು ಬಹಳ ಹೊಗಳಿದರು. ಚಿತ್ರದ ಬಗ್ಗೆ ಮಾತನಾಡುತ್ತಾ ಬಹಳ ಎಮೋಷನಲ್ ಆದರು. ನನ್ನ ಜೀವನದಲ್ಲಿ ವಿಜಯ್ ಅವರಂಥ ನಿರ್ದೇಶಕನನ್ನು ನಾನು ಭೇಟಿಯೇ ಆಗಿಲ್ಲ ಎಂದು ವಿಜಯ್ ಅವರನ್ನು ಹೊಗಳಿದರು. ಇನ್ನು ಎಂಜಿಆರ್ ಪಾತ್ರ ಮಾಡಿದ್ದ ಅರವಿಂದ್ ಸ್ವಾಮಿ ಅವರನ್ನು ಕೂಡಾ ಕಂಗನಾ ಬಹಳ ನೆನಪಿಸಿಕೊಂಡರು. ತಲೈವಿ ಸಿನಿಮಾ ಏಪ್ರಿಲ್ 23 ರಂದು ತೆರೆ ಕಾಣುತ್ತಿದೆ. ಚಿತ್ರದಲ್ಲಿ ಕಂಗನಾ ಹಾಗೂ ಅರವಿಂದ್ ಸ್ವಾಮಿ ಅವರೊಂದಿಗೆ ಪ್ರಕಾಶ್ ರಾಜ್, ಜಿಶು ಸೇನ್ ಗುಪ್ತಾ, ಪೂರ್ಣ, ಭಾಗ್ಯಶ್ರೀ ಹಾಗೂ ಇನ್ನಿತರರು ನಟಿಸಿದ್ದಾರೆ.