ತಮಿಳು ನಟ ಅಜಿತ್ ಕುಮಾರ್ ಅಭಿನಯದ 'ವಲಿಮೈ' ಸಿನಿಮಾ ಇದೇ ಫೆಬ್ರವರಿ 24ರಂದು ವಿಶ್ವಾದ್ಯಂತ ತೆರೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಮೋಷನ್ಗಾಗಿ ನಟಿ ಹುಮಾ ಖುರೇಷಿ ಹಾಗೂ ತೆಲುಗು ನಟ ಕಾರ್ತಿಕೇಯನ್ ಗುಮ್ಮಕೊಂಡ ಬೆಂಗಳೂರಿಗೆ ಬಂದಿದ್ದರು.
ಕನ್ನಡ ಸಿನಿಮಾ ಕೊಂಡಾಡಿದ ತೆಲುಗು ನಟ ಕಾರ್ತಿಕೇಯನ್ - Valimai Promotion
‘ಆರ್ಎಕ್ಸ್ 100’ ಸಿನಿಮಾ ಮೂಲಕ ದೊಡ್ಡಮಟ್ಟದ ಯಶಸ್ಸು ಗಳಿಸಿದವರು ಕಾರ್ತಿಕೇಯನ್. ಇದೀಗ ಇವರು ‘ವಲಿಮೈ’ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಪ್ರಮೋಷನ್ಗಾಗಿ ಬೆಂಗಳೂರಿಗೆ ಆಗಮಿಸಿದ ನಟ, ಕನ್ನಡ ಚಿತ್ರಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
![ಕನ್ನಡ ಸಿನಿಮಾ ಕೊಂಡಾಡಿದ ತೆಲುಗು ನಟ ಕಾರ್ತಿಕೇಯನ್ ತೆಲುಗು ನಟ ಕಾರ್ತಿಕೇಯನ್](https://etvbharatimages.akamaized.net/etvbharat/prod-images/768-512-14542252-thumbnail-3x2-lek.jpg)
'ವಲಿಮೈ' ಚಿತ್ರದಲ್ಲಿ ಅಜಿತ್ ಎದುರು ಖಳನಟನಾಗಿ ಕಾಣಿಸಿಕೊಂಡಿರುವ ಕಾರ್ತಿಕೇಯನ್, ಕನ್ನಡ ಸಿನಿಮಾಗಳು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿವೆ. ಅದರಲ್ಲೂ 'ಕೆಜಿಎಫ್' ಹಾಗೂ 'ವಿಕ್ರಾಂತ್ ರೋಣ' ಸಿನಿಮಾಗಳ ಕ್ವಾಲಿಟಿ ಅದ್ಧೂರಿಯಾಗಿ ಮೂಡಿ ಬರುತ್ತಿದೆ. ಕನ್ನಡ ಸಿನಿಮಾಗಳ ಗುಣಮಟ್ಟ ಈಗ ಪರಭಾಷೆಯ ಚಿತ್ರಗಳಿಗೆ ಪೈಪೋಟಿ ನೀಡುತ್ತಿರೋದು ಖುಷಿಯ ವಿಚಾರ ಎಂದು ಕಾರ್ತಿಕೇಯನ್ ಕನ್ನಡ ಚಿತ್ರಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದರ ಜೊತೆಗೆ, 'ವಲಿಮೈ' ಸಿನಿಮಾ ಶೂಟಿಂಗ್ ವೇಳೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದ ನಟ, ಅಜಿತ್ ಸರ್ ಬೈಕ್ ಸ್ಟಂಟ್ ಮಾಡಬೇಕಾದ್ರೆ ಆಯತಪ್ಪಿ ಬಿದ್ದರು. ಈ ವೇಳೆ ದೊಡ್ಡ ಪೆಟ್ಟು ಮಾಡಿಕೊಂಡರೂ ಶೂಟಿಂಗ್ ನಿಲ್ಲಿಸದೇ ಕಂಪ್ಲೀಟ್ ಮಾಡಿದರು. ನನ್ನಿಂದ ನಿರ್ಮಾಪಕರಿಗೆ ನಷ್ಟ ಆಗಬಾರದು ಅಂತಾ ಸರ್ ತುಂಬಾ ನೋವಿದ್ದರೂ ಶೂಟಿಂಗ್ ಮುಗಿಸಿದ್ದಾರೆ. ಅದು ನನಗೆ ಜೀವನಪೂರ್ತಿ ಸ್ಫೂರ್ತಿ ಎಂದರು.