ಮುಂಬೈ: ಬಿಗ್ಬಾಸ್ ಸೀಸನ್ 15 ಮುಕ್ತಾಯಗೊಂಡಿದ್ದು, ನಟ - ಮಾಡೆಲ್ ಪ್ರತೀಕ್ ಸೆಹಜ್ಪಾಲ್ರನ್ನು ಸೋಲಿಸಿದ ಟಿವಿ ತಾರೆ ತೇಜಸ್ವಿ ಪ್ರಕಾಶ್ 2022 ರ ಬಿಗ್ಬಾಸ್ ವಿಜೇತರಾಗಿ ಹೊರಹೊಮ್ಮಿದ್ದಾರೆ.
"Swaragini - Jodein Rishton Ke Sur" ಧಾರಾವಾಹಿ ಮೂಲಕ ಮನೆ ಮಾತಾಗಿರುವ ತೇಜಸ್ವಿ ಪ್ರಕಾಶ್ ಬಿಗ್ ಬಾಸ್ ಟ್ರೋಫಿ ಜೊತೆ 40 ಲಕ್ಷ ನಗದು ಬಹುಮಾನವನ್ನು ಮನೆಗೆ ತೆಗೆದುಕೊಂಡು ಹೋದರು.
ಶನಿವಾರದಂದು ನಡೆದ ಕಾರ್ಯಕ್ರಮದಲ್ಲಿ ನಿರೂಪಕ, ಸೂಪರ್ ಸ್ಟಾರ್ ಸಲ್ಮಾನ್ ಖಾನ್ ವಿಜೇತರನ್ನು ಘೋಷಿಸಿದರು. ಸೆಹಜ್‌ಪಾಲ್ ಮೊದಲ ರನ್ನರ್ ಅಪ್ ಆಗಿದ್ದರೆ, ಪ್ರಕಾಶ್ ಅವರ ನಟ - ಗೆಳೆಯ ಕರಣ್ ಕುಂದ್ರಾ ಮೂರನೇ ಸ್ಥಾನ ಪಡೆದರು.
ಓದಿ:ರಾಜ್ಯದಲ್ಲಿಂದು 28,264 ಮಂದಿಗೆ ಕೋವಿಡ್ ಸೋಂಕು: 68 ಸೋಂಕಿತರು ಬಲಿ
ನಟಿ ಶಮಿತಾ ಶೆಟ್ಟಿ ನಾಲ್ಕನೇ ಸ್ಥಾನ ಗಳಿಸಿದರೆ, ನೃತ್ಯ ನಿರ್ದೇಶಕ ನಿಶಾಂತ್ ಭಟ್ ಫಿನಾಲೆ ರೇಸ್‌ನಿಂದ ಹೊರಗುಳಿದು 10 ಲಕ್ಷ ರೂಪಾಯಿ ಪಡೆದು ಐದನೇ ಸ್ಥಾನ ಪಡೆದರು. ಟಿವಿ ತಾರೆಯಾಗಿ ಅವರು ಗಳಿಸಿದ ಜನಪ್ರಿಯತೆಯಿಂದಾಗಿ ಪ್ರಕಾಶ್ ಬಿಗ್ಬಾಸ್ 15ಕ್ಕೆ ಎಂಟ್ರಿ ಕೊಟ್ಟಿದ್ದರು. ಕಳೆದ ವರ್ಷ ಬಿಗ್ ಬಾಸ್ OTT ನಡೆದಿದ್ದು, ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದ ಸೆಹಜ್‌ಪಾಲ್ ಕಾರ್ಯಕ್ರಮದುದ್ದಕ್ಕೂ ಜನಪ್ರಿಯರಾಗಿದ್ದರು.