'ಹಿಂದಿ ಬಿಗ್ ಬಾಸ್ 15'ರಲ್ಲಿ ಫ್ರೆಂಡ್ಶಿಪ್, ಲವ್ ರಿಲೇಷನ್ಶಿಪ್ ಜೊತೆಗೆ ಜಗಳಗಳು ಸಾಮಾನ್ಯ. ಟಾಸ್ಕ್ ವಿಚಾರವಾಗಿ ಪ್ರತಿದಿನವೂ ಸ್ಪರ್ಧಿಗಳ ನಡುವೆ ಕಾದಾಟ ಇದ್ದೇ ಇರುತ್ತದೆ. ಅದರಂತೆ ಟಾಸ್ಕ್ವೊಂದರ ವಿಚಾರವಾಗಿ ಸ್ಪರ್ಧಿಗಳಾದ ತೇಜಸ್ವಿ ಪ್ರಕಾಶ್ ಮತ್ತು ಅಭಿಜಿತ್ ಬಿಚ್ಚುಕಳೆ ನಡುವೆ ವೈಮನಸ್ಸುಂಟಾಗಿದೆ.
ಗರಿಷ್ಠ ಪ್ರಮಾಣದ ಸ್ಪಾಂಜ್ ಚೆಂಡುಗಳನ್ನು ಸಂಗ್ರಹಿಸುವುದು ಮತ್ತು ಅವರ ಎದುರಾಳಿಗಳಿಂದ ರಕ್ಷಿಸಿಕೊಳ್ಳುವ ಟಾಸ್ಕ್ ಸ್ಪರ್ಧಿಗಳಲ್ಲಿ ತೀವ್ರತರನಾದ ಸ್ಪರ್ಧೆ ಸೃಷ್ಟಿಸಿತ್ತು. ಎಲಿಮಿನೇಟ್ ಆಗದೇ ಮನೆಯಲ್ಲಿ ಉಳಿದುಕೊಳ್ಳಲು ಟಾಸ್ಕ್ ನೆರವಾಗಿತ್ತು. ಸ್ಪರ್ಧಿಗಳು ಕಾರ್ಯತಂತ್ರವನ್ನು ರೂಪಿಸಲು ಮತ್ತು ಮೈತ್ರಿ ಮಾಡಿಕೊಳ್ಳಲು ಶುರು ಹಚ್ಚಿಕೊಂಡಿದ್ದರು. ಈ ವೇಳೆ ಅಭಿಜಿತ್ ಬಿಚ್ಚುಕಳೆ ಪ್ರತಿಸ್ಪರ್ಧಿ ತೇಜಸ್ವಿಯ ಸ್ಪಾಂಜ್ ಬ್ಯಾಗ್/ಬುಟ್ಟಿ ಅನ್ನು ಕಸಿದುಕೊಳ್ಳಲು ಪ್ರಯತ್ನಿಸಿದರು. ಇದು ಅವರ ನಡುವೆ ಅಸಹ್ಯಕರ ಜಗಳಕ್ಕೆ ಕಾರಣವಾಯಿತು.