ಆರ್‌ಆರ್‌ಆರ್ ಚಿತ್ರತಂಡ ಜ್ಯೂನಿಯರ್ ಎನ್‌ಟಿಆರ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ. ನಾಳೆ ಅಂದ್ರೆ ಅಕ್ಟೋಬರ್ 22ರಂದು ‘ರಾಮರಾಜು ಫಾರ್ ಭೀಮ್’ ಲುಕ್ನ್ನು ಬಿಡುಗಡೆ ಮಾಡುವುದಾಗಿ ರಾಜಮೌಳಿ ಚಿತ್ರತಂಡ ಹೇಳಿದ್ದು, ಇದಕ್ಕೆ ಸಂಬಂಧಿಸಿದಂತೆ ವಿಡಿಯೋವೊಂದನ್ನು ರಾಮ್ ಚರಣ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ಈ ವಿಡಿಯೋ ನಟ ರಾಮ್ ಚರಣ್ ಅವರು ಜ್ಯೂನಿಯರ್ ಎನ್ಟಿಆರ್ಗೆ ಟ್ಯಾಗ್ ಮಾಡಿ ‘ನಿಮ್ಮ ಹಾಗೇ ನಾನು ತಡ ಮಾಡಲ್ಲ. ಸರಿಯಾದ ಸಮಯಕ್ಕೆ ವಿಡಿಯೋ ರಿಲೀಸ್ ಮಾಡುತ್ತೇನೆ’ ಅಂತಾ ಎನ್ಟಿಆರ್ಗೆ ಚೇಷ್ಟೆ ಮಾಡಿದ್ದಾರೆ.
ಇನ್ನು ಇದಕ್ಕೆ ಉತ್ತರಿಸಿದ ಜ್ಯೂ.ಎನ್‌ಟಿಆರ್ ‘ಸಹೋದರ, ಈಗಾಗಲೇ ಐದು ತಿಂಗಳು ಆಲಸ್ಯ ಮಾಡಿರುವ ವಿಷಯ ತಿಳಿದುಕೊಳ್ಳಬೇಕು. ಜಕ್ಕನ್ನ (ರಾಜಮೌಳಿ) ಡಿಲಿಂಗ್ ಇರುವುದರಿಂದ ಕೊಂಚ ಹುಷಾರಾಗಿರು. ಏನಾದ್ರೂ ಆಗುತ್ತೆ. ಆದ್ರೂ ಸಹ ನಾನು ಸಂಪೂರ್ಣ ವಿಡಿಯೋಗಾಗಿ ಕಾಯುತ್ತಿದ್ದೇನೆ ಅಂತಾ ಎನ್‌ಟಿಆರ್ ಹೇಳಿದ್ದಾರೆ.
ಈ ಹಿಂದೆ ರಾಮ್ ಚರಣ್ರ ಅಲ್ಲೂರಿ ಸೀತಾರಾಮರಾಜು ಲುಕ್ ವಿಡಿಯೋವನ್ನು ಎನ್‌ಟಿಆರ್ ತಾಂತ್ರಿಕ ಸಮಯದಿಂದಾಗಿ ತಡವಾಗಿ ಬಿಡುಗಡೆ ಮಾಡಿದ್ದರು. ಹೀಗಾಗಿ ನಟ ಚರಣ್ ನಿಮ್ಮ ಹಾಗೇ ನಾನು ವಿಡಿಯೋ ರಿಲೀಸ್ ಮಾಡಲು ನಿಧಾನ ಮಾಡುವುದಿಲ್ಲ ಎಂದು ಹೇಳಿದ್ದಾರೆ. ರಾಮ್ ಚರಣ್ ನಾಳೆ ಬೆಳಗ್ಗೆ 11 ಗಂಟೆಗೆ ‘ರಾಮರಾಜು ಫಾರ್ ಭೀಮ್’ ಲುಕ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಲಿದ್ದಾರೆ.
ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್‌ರನ್ನು ಆಧುನಿಕ ಯುಗದಲ್ಲಿ ಸಹೋದರನಂತೆ ಚಿತ್ರಿಸಲಿದ್ದು, ಅವರು ವಿಭಿನ್ನ ಯುಗದ ಫ್ಲ್ಯಾಷ್‌ಬ್ಯಾಕ್‌ನಲ್ಲಿ ಬಂಡುಕೋರರಾದ ಕೋಮರಾಮ್ ಭೀಮ್ ಮತ್ತು ಅಲ್ಲೂರಿ ಸೀತಾರಾಮರಾಜು ಆಗಿ ಕಾಣಿಸಿಕೊಳ್ಳಲಿದ್ದಾರೆ. ಆರ್‌ಆರ್‌ಆರ್ ಚಿತ್ರವನ್ನು ಡಿವಿವಿ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ಡಿವಿವಿ ದಾನಯ್ಯ ನಿರ್ಮಿಸುತ್ತಿದ್ದಾರೆ. ಮುಂದಿನ ವರ್ಷ ಬೇಸಿಗೆಯಲ್ಲಿ ಸುಮಾರು 10 ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.
ಬಾಲಿವುಡ್ ನಟಿ ಆಲಿಯಾ ಭಟ್ ಅವರು ನಟ ರಾಮ್‌ಚರಣ್ ಜೊತೆ ಜೋಡಿಯಾಗಲಿದ್ದು, ಹಾಲಿವುಡ್ ನಟಿ ಒಲಿವಿಯಾ ಮೋರಿಸ್ ಎನ್‌ಟಿಆರ್ ಜೊತೆ ನಟಿಸಲಿದ್ದಾರೆ. ಬಾಲಿವುಡ್ ನಟ ಅಜಯ್ ದೇವ್‌ಗನ್, ಹಾಲಿವುಡ್ ನಟರಾದ ಎಲಿಸನ್ ದುಡಿ ಮತ್ತು ರೇ ಸ್ಟೀವ್ಸನ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.