ಮುಂಬೈ : ಲೈಂಗಿಕ ದೌರ್ಜನ್ಯದ ಪ್ರಕರಣದಡಿ ನಟ ನಾನಾ ಪಾಟೇಕರ್ಗೆ ಸಿಕ್ಕಿರುವ ಕ್ಲೀನ್ ಚಿಟ್ ಪ್ರಶ್ನಿಸಿ ನಟಿ ತನುಶ್ರೀ ದತ್ ಕೋರ್ಟ್ ಮೆಟ್ಟಿಲೇರಿದ್ದಾರೆ.
ಕೋರ್ಟ್ ಮೆಟ್ಟಿಲೇರಿದ ತನುಶ್ರೀ...'ನಾನಾ'ಗೆ ಮತ್ತೆ ಸಂಕಷ್ಟ
ಕಳೆದ ವರ್ಷ ಮೀಟೂ ಅಭಿನಯಾದಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಟಿ ತನುಶ್ರೀ ದತ್, ಹಿರಿಯ ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಚಿತ್ರೀಕರಣದ ವೇಳೆ ನನಗೆ ಕಿರುಕುಳ ನೀಡಿದ್ದರು ಎಂದು ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು.
ತನುಶ್ರೀ, 2008 ರಲ್ಲಿ ಪಾಟೇಕರ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ಆರೋಪಿಸಿ ಕಳೆದ ಸೆಪ್ಟೆಂಬರ್ಲ್ಲಿ ಓಶಿಯಾರಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದ ಪೊಲೀಸರು, ಕಳೆದ ತಿಂಗಳು (ಜೂನ್) ಸಾಕ್ಷಾಧಾರ ಕೊರತೆಯಿಂದ ನಾನಾ ಪಾಟೇಕರ್ಗೆ ಕ್ಲೀನ್ ಚಿಟ್ ನೀಡಿ ಕೇಸ್ ಕ್ಲೋಸ್ ಮಾಡಿದ್ದರು.
ಸದ್ಯ ಪೊಲೀಸರು ಈ ಕ್ರಮದ ವಿರುದ್ಧ ಕೋರ್ಟ್ ಮೆಟ್ಟಿಲೇರಿರುವ ತನುಶ್ರೀ, ತಮ್ಮ ವಕೀಲ ನಿತಿನ್ ಸತ್ಪೂಟೆ ಮೂಲಕ ಅಂಧೇರಿಯಲ್ಲಿರುವ ರೈಲ್ವೆ ಕೋರ್ಟ್ನಲ್ಲಿ ಪಿಟಿಷನ್ ಹೂಡಿದ್ದಾರೆ. ನ್ಯಾಯಾಲಯ ಕೂಡ ಇದಕ್ಕೆ ಅವಕಾಶ ನೀಡಿದೆ. ನಿನ್ನೆ ಈ ಅರ್ಜಿ ವಿಚಾರಣೆಗೆ ಬಂತು. ಆದರೆ, ಓಶಿಯಾರಾ ಪೊಲೀಸ್ ಠಾಣೆಯಿಂದ ಯಾರೂ ಹಾಜರಿರದ ಹಿನ್ನೆಲೆ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 7ಕ್ಕೆ ಮುಂದೂಡಲಾಯಿತು.