ಥೀಯೆಟರ್ಗೂ ಬರುವ ಮುನ್ನ ಹಲವು ಚಿತ್ರಗಳನ್ನು ತಮಿಳ್ ರಾಕರ್ಸ್ತಂಡ ತನ್ನ ವೆಬ್ಸೈಟ್ಲ್ಲಿ ಲೀಕ್ ಮಾಡುವ ಮೂಲಕ ಕಳ್ಳಾಟವನ್ನು ಮುಂದುವರೆಸಿದೆ.
ಅಜಯ್ ಚಿತ್ರಕ್ಕೂ ಕನ್ನ ಹಾಕಿದ ಸಿನಿಗಳ್ಳರು... ದೇ ದೇ ಪ್ಯಾರ್ ದೇ ದೋಚಿದ ರಾಕರ್ಸ್ - Tamilrockers
ಮಾಲಿವುಡ್ನಿಂದ ಬಾಲಿವುಡ್ ವರೆಗೂ ಚಿತ್ರ ನಿರ್ಮಾಪಕರು ಮತ್ತು ನಟ ಹಾಗೂ ನಟಿಯರ ತಲೆ ಬಸಿ ಮಾಡಿದ ತಮಿಳ್ ಹ್ಯಾಕರ್ಸ್ ತಂಡ ತನ್ನ ಕಳ್ಳಾಟವನ್ನು ಮುಂದುವರೆಸಿದೆ. ಇಂದು ಮೂರ್ನಾಲ್ಕು ಸಿನಿಮಾಗಳನ್ನು ಆನ್ಲೈನ್ನಲ್ಲಿ ಲೀಕ್ ಮಾಡಿ ಚಿತ್ರ ನಟರ ಆಕ್ರೋಶಕ್ಕೆ ಕಾರಣವಾಗಿದೆ.
ಸೌಥ್ ಸಿನಿಮಾಗಳಾದ ಮಿಸ್ಟರ್ ಲೋಕಲ್ ಹಾಗೂ ಎಬಿಸಿಡಿ ಚಿತ್ರವನ್ನು ಬಿಡುಗಡೆಯಾದ ದಿನದಂದೇ ಆನ್ಲೈನ್ಲ್ಲಿ ಸೋರಿಕೆ ಮಾಡಿದ ತಮಿಳ್ ರಾಕರ್ಸ್, ಇದೀಗ ಬಾಲಿವುಡ್ ನಟ ಅಜಯ್ ದೇವಗನ್ ನಟನೆಯ ದೇ ದೇ ಪ್ಯಾರ್ ದೇ ಸಂಪೂರ್ಣ ಸಿನಿಮಾವನ್ನು ಲೀಕ್ ಮಾಡಿದೆ.
ಚಿತ್ರಗಳನ್ನು ಸೋರಿಕೆ ಮಾಡುವ ಮೂಲಕ ಹ್ಯಾಕರ್ಸ್ ತಂಡ ತನ್ನ ಕಳ್ಳಾಟವನ್ನು ಮುಂದುವರೆಸಿದೆ. ಪೈರಸಿ ಹಾವಳಿ ಬಗ್ಗೆ ನ್ಯಾಯಾಲಯ ಕಠಿಣ ಕಾನೂನು ಕ್ರಮಗಳನ್ನು ಕೈಗೊಂಡಿದ್ದರು ಸಹ ಹ್ಯಾಕರ್ಸ್ಗಳು ಚಿತ್ರಗಳ ಸೋರಿಕೆ ಮಾಡುವುದನ್ನು ಮಾತ್ರ ನಿಲ್ಲಿಸಿಲ್ಲ. ರೊಮ್ಯಾಂಟಿಕ್ ಹಾಗೂ ಕಾಮಿಡಿ ದೇ ದೇ ಪ್ಯಾರ್ ದೇ ಚಿತ್ರದಲ್ಲಿ ಅಜಯ್ ದೇವಗನ್, ಟಬು, ರಕುಲ್ ಪ್ರಿತ್ ಸಿಂಗ್ ಸೇರಿದಂತೆ ಇತರೆ ಬಾಲಿವುಡ್ ನಟರು ಕಾಣಿಸಿಕೊಂಡಿದ್ದಾರೆ. ಥೀಯೆಟರ್ಗೆ ಹೋಗಿ ನೋಡಬೇಕಾದ ಚಿತ್ರಗಳು ಈ ರೀತಿ ಸೋರಿಕೆಯಾಗುತ್ತಿರುವುದರಿಂದ ಚಿತ್ರ ತಂಡ ಆಕ್ರೋಶ ಹೊರಹಾಕಿವೆ.