ಹೈದರಾಬಾದ್:ಬಾಲಿವುಡ್ ನಟಿ ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ದಂಪತಿಯ ಮೊದಲ ಪುತ್ರ ತೈಮೂರ್ ಅಲಿ ಖಾನ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರೀಯತೆ ಪಡೆದಿದ್ದಾನೆ. ಆಗಾಗ ಕರಿನಾ ತೈಮೂರ್ ಜೊತೆಗಿನ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.
ಕೆಲ ದಿನಗಳ ಹಿಂದೆ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಕರೀನಾ, ತೈಮೂರ್ ಜೊತೆಗಿನ ಒಂದು ಮುದ್ದಾದ ಫೋಟೋ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಅಮ್ಮನ ಜೊತೆ ತೈಮೂರ್ ಸೆಲ್ಫಿಗೆ ಪೋಸ್ ನೀಡಿದ್ದಾನೆ. ಇನ್ನು ಚಿತ್ರವನ್ನು ಪೋಸ್ಟ್ ಮಾಡಿ ಕರೀನಾ, ನನ್ನ ಟೀ ಶರ್ಟ್ನಲ್ಲಿ ಏನಿದೆ ಟಿಮ್ ಎಂದು ಶೀರ್ಷಿಕೆ ನೀಡಿದ್ದಾರೆ.