ಬಾಲಿವುಡ್ ನಟ ತಹೀರ್ ರಾಜ್ ಭಶಿನ್ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಲೂಪ್ ಲಪೇಟ ಎಂದು ನಾಮಕರಣ ಮಾಡಿದ್ದು, ಈ ಸಿನಿಮಾ ಚಿತ್ರೀಕರಣಕ್ಕಾಗಿ ಕಾಯಲು ಸಾಧ್ಯವಿಲ್ಲ. ಅಷ್ಟು ಉತ್ಸುಕನಾಗಿದ್ದೇನೆ ಎಂದು ನಟ ತಹೀರ್ ರಾಜ್ ಭಶಿನ್ ಹೇಳಿದ್ದಾರೆ.
ಸಿನಿಮಾ ಚಿತ್ರೀಕರಣ ಯಾವಾಗ ಶುರುವಾಗುತ್ತದೆ ಎಂದು ಕಾಯುತ್ತಿದ್ದೇನೆ. ಇದೊಂದು ಅದ್ಭುತ ಕಥೆಯನ್ನು ಹೊಂದಿರುವ ಸಿನಿಮಾ. ಅಲ್ಲದೇ ಈ ಸಿನಿಮಾ ಕಥೆಗೂ ನನಗೂ ನಿಕಟ ಸಂಬಂಧವಿದೆ ಅನ್ನಿಸುತ್ತಿದೆ. ಚಿತ್ರದಲ್ಲಿ ನಾನೇ ಬದುಕುತ್ತಿದ್ದೇನೆ ಅನ್ನಿಸುತ್ತಿದೆ.
ಲಾಕ್ಡೌನ್ ವೇಳೆಯಲ್ಲಿ ಸಿನಿಮಾ ಕಥೆಯಲ್ಲಿ ಬದಲಾವಣೆಯಾಗಿದ್ದು, ಆ ಬದಲಾವಣೆಗೆ ಸಂಬಂಧಿಸದಂತೆ ನಾನು ತಯಾರಿ ನಡೆಸಿದ್ದೇನೆ. ಇದು ನನಗೆ ಖುಷಿಯ ಜೊತೆ ಚಾಲೆಂಜಿಂಗ್ ಆಗಿದೆ ಎಂದು ತಹೀರ್ ರಾಜ್ ಭಶಿನ್ ಹೇಳಿದ್ದಾರೆ. ಈ ಚಿತ್ರಕ್ಕೆ ಆಕಾಶ್ ಭಾಟಿಯ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.