ಕರ್ನಾಟಕ

karnataka

ETV Bharat / sitara

24ರ 'ಎ ಸೂಟಬಲ್ ಬಾಯ್‌' ಜೊತೆ 40ರ ಟಬು ರೊಮ್ಯಾನ್ಸ್​​​​​ - ಇಷಾನ್ ಖಟ್ಟರ್ ಜೊತೆ ಟಬು ರೊಮ್ಯಾನ್ಸ್

'ಎ ಸೂಟಬಲ್ ಬಾಯ್' ಚಿತ್ರದಲ್ಲಿ ಟಬು ಹಾಗೂ ಇಷಾನ್ ನಟಿಸುತ್ತಿದ್ದಾರೆ. ಚಿತ್ರದ ಫಸ್ಟ್​​​​​ಲುಕ್ ಕೂಡಾ ಬಿಡುಗಡೆಯಾಗಿದ್ದು, ಈ ಪೋಸ್ಟರ್​​​ನಲ್ಲಿ ಟಬು ಉಯ್ಯಾಲೆ ಮೇಲೆ ಕುಳಿತಿದ್ದರೆ, ಇಷಾನ್ ಕೂಡಾ ಉಯ್ಯಾಲೆ ಮೇಲೆ ಮಲಗಿ ಟಬುವನ್ನು ನೋಡುತ್ತಿರುವ ದೃಶ್ಯವಿದೆ.

A suitable boy
'ಎ ಸೂಟಬಲ್ ಬಾಯ್'

By

Published : Dec 3, 2019, 9:17 PM IST

Updated : Dec 3, 2019, 9:22 PM IST

ಇದೇನಪ್ಪಾ ಟಬು ಎಲ್ಲಿ..24 ವರ್ಷದ ಇಷಾನ್ ಖಟ್ಟರ್​​​​ ಎಲ್ಲಿ...ಇವರಿಬ್ಬರ ನಡುವೆ ಎಂತ ರೊಮ್ಯಾನ್ಸ್ ಅಂತ ಯೋಚಿಸುತ್ತಿದ್ದೀರಾ...? ಇವರಿಬ್ಬರೂ ರೊಮ್ಯಾನ್ಸ್ ಮಾಡುತ್ತಿರುವುದು ಸಿನಿಮಾದಲ್ಲಿ. ಮೀರಾ ನಾಯರ್​ ನಿರ್ದೇಶನದ 'ಎ ಸೂಟಬಲ್ ಬಾಯ್' ಚಿತ್ರದಲ್ಲಿ ಟಬು ಹಾಗೂ ಇಷಾನ್ ನಟಿಸುತ್ತಿದ್ದಾರೆ.

ಈ ಚಿತ್ರದಲ್ಲಿ ಟಬು ವೇಶ್ಯೆ ಪಾತ್ರದಲ್ಲಿ ಹಾಗೂ ಇಷಾನ್ ಖಟ್ಟರ್​​​​​ ರಾಜಕೀಯ ನಾಯಕನ ಪುತ್ರನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಫಸ್ಟ್​​​​​ಲುಕ್ ಕೂಡಾ ಬಿಡುಗಡೆಯಾಗಿದೆ. ಈ ಪೋಸ್ಟರ್​​​ನಲ್ಲಿ ಟಬು ಉಯ್ಯಾಲೆ ಮೇಲೆ ಕುಳಿತಿದ್ದರೆ ಇಷಾನ್ ಕೂಡಾ ಉಯ್ಯಾಲೆ ಮೇಲೆ ಮಲಗಿ ಟಬುವನ್ನು ನೋಡುತ್ತಿರುವ ದೃಶ್ಯವಿದೆ. ವಿಕ್ರಮ್ ಸೇಠ್ ಬರೆದ ಪುಸ್ತಕವೊಂದರ ಆಧಾರದ ಮೇಲೆ ಈ ಸಿನಿಮಾವನ್ನು ತಯಾರಿಸಲಾಗುತ್ತಿದೆ. ಚಿತ್ರದಲ್ಲಿ ಟಬು ಸೈದಾಬಾಯಿ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸೆಪ್ಟೆಂಬರ್​​​​ನಿಂದ ಚಿತ್ರದ ಶೂಟಿಂಗ್ ಆರಂಭವಾಗಿದ್ದು ಬಹುತೇಕ ಚಿತ್ರದ ಶೂಟಿಂಗ್ ಮುಗಿದಿದೆ. ಲಖ್ನೌ ನಗರದ ರಾಜಭವನ ಹಾಗೂ ಮಹೇಶ್ವರಂ ಪ್ರಾಂತ್ಯದಲ್ಲಿ ಹೆಚ್ಚಾಗಿ ಚಿತ್ರೀಕರಣ ಜರುಗಿದೆ. ಇದಕ್ಕೂ ಮುನ್ನ ಟಬು ಮೀರಾ ನಾಯರ್ ನಿರ್ದೇಶನದಲ್ಲಿ 'ದಿ ನೇಮ್​ ಸೇಕ್​​' ಎಂಬ ಸಿನಿಮಾದಲ್ಲಿ ನಟಿಸಿದ್ದರು. 2020 ರಲ್ಲಿ ತೆರೆಗೆ ಬರಲಿರುವ ಈ ಸಿನಿಮಾದಲ್ಲಿ ತಾನ್ಯ ಮಣಿಕ್ತಾಲ, ರಸಿಕ ದುಗ್ಗಲ್​, ಷಹಾನಾ ಗೋಸ್ವಾಮಿ, ನಮಿತ ದಾಸ್, ವಿವೇಕ್ ಗೋಂಬರ್ ಹಾಗೂ ಇನ್ನಿತರರು ನಟಿಸುತ್ತಿದ್ದಾರೆ.

Last Updated : Dec 3, 2019, 9:22 PM IST

ABOUT THE AUTHOR

...view details